ಫ್ಲಿಪ್ಕಾರ್ಟ್‌ನ ಸಮರ್ಥ್-ಟ್ರೈಫೆಡ್ ಪಾಲುದಾರಿಕೆಯ ಅಂಗವಾಗಿ ಈ ಸಲದ ಬಿಗ್ ಬಿಲಿಯನ್ ಡೇಸ್ನಲ್ಲಿ ಭಾರತದ ಅತ್ಯಂತ ದೂರದ ಕಲೆಗಾರರು ಮತ್ತು ಕುಶಲಕರ್ಮಿಗಳು ತಮ್ಮ ಆದಿವಾಸಿ ಮತ್ತು ಸ್ಥಳೀಯ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಅವರ ಪರಂಪರೆ-ಸಮೃದ್ಧವಾದ #ಭಾರತದ ಕಲಾ ಪ್ರಕಾರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಓದುವುದನ್ನು ಮುಂದುವರೆಸೆ, ಮತ್ತು ಈ ಬಾರಿಯ ಹಬ್ಬಗಳ ಸಮಯದಲ್ಲಿ ಅವರನ್ನು ಖಂಡಿತವಾಗಿ ಬೆಂಬಲಿಸಿ.
ಸರಳ ಆದರೆ ಅರ್ಥಪೂರ್ಣವಾದ, ಗ್ರಾಮೀಣ ಆದರೆ ಸಮೃದ್ಧವಾದ – ಸ್ಥಳೀಯ ಮತ್ತು ಆದಿವಾಸಿ ಕಲಾ ಪ್ರಕಾರಗಳು ಭಾರತದ ರೋಮಾಂಚನಕಾರಿಯಾದ ಕಲಾ ಪರಂಪರೆಯ ಒಂದು ಮುಖ್ಯ ಭಾಗವಾಗಿವೆ.
ಭಾರತದ ಆದಿವಾಸಿ ಸಹಕಾರ ಮಾರಾಟ ಅಭಿವೃದ್ಧಿ ಒಕ್ಕೂಟ (ಟ್ರೈಫೆಡ್), ಆದಿವಾಸಿ ವಿಷಯಗಳ ಮಂತ್ರಾಲಯ ನಡೆಸುವ ಸಂಸ್ಥೆಯನ್ನು ೧೯೮೭ರಲ್ಲಿ ಆದಿವಾಸಿ ಕಲೆ, ಕಲಾಕೃತಿ ಮತ್ತು ಕೈಮಗ್ಗವನ್ನು ಉತ್ತೇಜಿಸಲು ಸ್ಥಾಪಿಸಲಾಯಿತು. ಇದು ಭಾರತದಾದ್ಯಂತ ಆದಿವಾಸಿ ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಮಾರಾಟ ಮಾಡುವ ಜವಾಬ್ದಾರಿಯನ್ನು ಹೊಂದಿದ್ದು ಸುಮಾರು ೩,೫೦,೦೦೦ ಆದಿವಾಸಿ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಅಗ್ರ ಸಂಸ್ಥೆ ತನ್ನ ವಿಶಿಷ್ಟವಾದ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪಂಕ್ತಿಯನ್ನು ತನ್ನ ಟ್ರೈಬ್ಸ್ ಇಂಡಿಯ ಎಂಬ ಛಾಪಿನ ಅಡಿಯಲ್ಲಿ ಮಾರಾಟಮಾಡುತ್ತದೆ.
೨೦೨೦ರಲ್ಲಿ ಟ್ರೈಬ್ಸ್ ಇಂಡಿಯ ಫ್ಲಿಪ್ಕಾರ್ಟ್ ಸಮರ್ಥ್‌ನ ಜೊತೆ ಪಾಲುದಾರಿಕೆ ಮಾಡಿಕೊಂಡಿತು. ಇದರ ಉದ್ದೇಶ ಈ ಉತ್ಪನ್ನಗಳನ್ನು ಒಂದು ಆನ್ಲೈನ್ ವೇದಿಕೆಗೆ ತರುವುದು ಮತ್ತು ಅದರಿಂದ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಈ ಕಲೆಗೆ ಭಾರತದಾದ್ಯಂತ ೩೫೦ ದಶಲಕ್ಷಕ್ಕೂ ಹೆಚ್ಚು ಗಿರಾಕಿಗಳಿರುವ ಆಧುನಿಕ ಮಾರುಕಟ್ಟೆಯನ್ನು ನೀಡುವುದಾಗಿದೆ.
ಈ ಬಾರಿಯ ಬಿಗ್ ಬಿಲಿಯನ್ ಡೇಸ್ನಲ್ಲಿ ʼಭಾರತದ ಕಲಾ ಪ್ರಕಾರಗಳುʼ ಎನ್ನುವ ವಿಷಯದ ಅಡಿಯಲ್ಲಿ ಈ ಕಾರ್ಯಕ್ರಮದ ಭಾಗವಾಗಿರುವ ಕುಶಲಕರ್ಮಿಗಳು ಮತ್ತು ನೇಕಾರರು ಒಂದು ವಿಶೇಷ ಸರಣಿಯ ಉತ್ಪನ್ನಗಳನ್ನು ಆಯ್ಕೆಮಾಡಿದ್ದಾರೆ.
ಕುಶಲಕರ್ಮಿಗಳ ಅರ್ಥಪೂರ್ಣವಾದ ಮತ್ತು ಪರಂಪರೆ-ಸಮೃದ್ಧ ಕೆಲಸದ ಮೂಲಕ ಭಾರತದ ಕಲೆ ಮತ್ತು ಆತ್ಮವನ್ನು ಇಣುಕಿ ನೋಡಿ; ಈ ಸಲದ ಹಬ್ಬದ ಸಮಯದಲ್ಲಿ ಫ್ಲಿಪ್ಕಾರ್ಟ್‌ನ ಮೂಲಕ ಈ ಕುಶಲಕರ್ಮಿಗಳನ್ನು ನೇರವಾಗಿ ಬೆಂಬಲಿಸಿ.
ವರ್ಲಿ ಕಲಾ ಉತ್ಪನ್ನಗಳು
ಗುಜರಾತ್
ವರ್ಲಿ ಕಲೆಯು ಗುಜರಾತ್‌ನ ಡಾಂಗ್ ಜಿಲ್ಲೆಯ ಕುಶಲಕರ್ಮಿಗಳು ಪಾಲಿಸಿಕೊಂಡು ಬಂದಿರುವ ಒಂದು ಕಲೆಯ ಪ್ರಕಾರ. ಆ ರಾಜ್ಯದ ದಕ್ಷಿಣದ ಸರಹದ್ದಿನ ಪ್ರದೇಶಗಳಲ್ಲಿ ವಾಸಿಸುವ ವರ್ಲಿ ಸಮುದಾಯದ ಕುಶಲಕರ್ಮಿಗಳು ಸಾಂಪ್ರದಾಯಿಕವಾಗಿ ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಭಾರತದ ಅನೇಕ ಕಲಾ ಪ್ರಕಾರಗಳಂತೆ ವರ್ಲಿಗೂ ಆಚರಣೆಯ ಮಹತ್ವವಿದೆ – ಈ ಚಿತ್ರಗಳನ್ನು ಮದುವೆಗಳು ಮತ್ತು ಸುಗ್ಗಿ ಕಾಲದಲ್ಲಿ ರಚಿಸಲಾಗುತ್ತದೆ. ಮಧ್ಯದ ಪ್ರಮುಖ ಲಕ್ಷಣವು ದೇವಿಯನ್ನು ಸಂಕೇತಿಸುತ್ತದೆ ಮತ್ತು ಫಲವತ್ತತೆ ಅಥವ ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ; ಅದನ್ನು ಚೌಕಾಕಾರದಲ್ಲಿ ಚಿತ್ತಿಸಲಾಗುತ್ತದೆ. ವೃತ್ತವು ಸೂರ್ಯ ಮತ್ತು ಚಂದ್ರರನ್ನು ಸಂಕೇತಿಸುತ್ತದೆ, ಮತ್ತು ತ್ರಿಭುಜಗಳು ಮನುಷ್ಯರ ಆಕಾರಗಳನ್ನು ಸಂಕೇತಿಸುತ್ತವೆ. ಅವರ ಕಲೆ ಸಾಮಾನ್ಯವಾಗಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸೌಹಾರ್ದವನ್ನು ಚಿತ್ರಿಸುತ್ತದೆ ಮತ್ತು ಅದಕ್ಕಾಗಿ ಶ್ರಮಿಸುತ್ತದೆ.
ತಯಾರಿಸುವವರನ್ನು ಭೇಟಿ ಮಾಡಿ
ಫ್ಲಿಪ್ಕಾರ್ಟ್‌ನಲ್ಲಿ ಈ ಕುಶಲಕರ್ಮಿಗಳನ್ನು ನೇರವಾಗಿ ಬೆಂಬಲಿಸಲು ಇಲ್ಲಿ ಒತ್ತಿ.
ಮಹೇಶ್ವರಿ ಸೀರೆ
ಮಧ್ಯಪ್ರದೇಶ
ಮಹೇಸ್ವಿ ಸೀರಿಯ ಪರಿಕಲ್ಪನೆ ೧೮ನೇ ಶತಮಾನದಷ್ಟು ಹಿಂದೆ ಮಧ್ಯಪ್ರದೇಶದ ಮಹೇಶ್ವರ್ ತನಕ ಹೋಗುತ್ತದೆ. ಈ ಸೀರಿಗಳನ್ನು ಮೊದಲು ಅಪ್ಪಟ ರೇಷ್ಮೆಯಿಂದ ತಯಾರಿಸಲಾಗಿತ್ತಿತ್ತು, ಆದರೆ ಕಾಲ ಕಳೆದಂತೆ ಅದರ ಅಡ್ಡ ಎಳೆಯಲ್ಲಿ ಹತ್ತಿಯನ್ನು ತರಲಾಯಿತು. ಮಧ್ಯಪ್ರದೇಶದ ಕೋಟೆಗಳ ವೈಭವ ಮತ್ತು ಅವುಗಳ ವಿನ್ಯಾಸಗಳು ಮಹೇಶ್ವರಿ ಸೀರಿಯ ಮೇಲಿನ ವಿಶಿಷ್ಟ ಸಂಕೇತ ರಚಿಸಲು ಪ್ರೇರಣೆ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ.
ತಯಾರಿಸುವವರನ್ನು ಭೇಟಿ ಮಾಡಿ
ಈ ಸೀರೆಗಳನ್ನು ತಯಾರಿಸುವ ಕುಶಲಕರ್ಮಿಗಳು ಅವುಗಳ ಹುಟ್ಟೂರಾದ ಮಹೇಶ್ವರದ ನಿವಾಸಿಗಳು. ಅವರ ಸ್ವಸಹಾಯ ಗುಂಪಿನ ಹೆಸರು ಮಾ ಅಹಿಲ್ಯ ಸಮೂಹ್ ಮತ್ತು ಈ ಗುಂಪಿನ ಮಹಿಳೆಯರು ಈ ಪ್ರದೇಶದಲ್ಲಿ ವಾಸಿಸುವ ಆದಿವಾಸಿ ಸಮುದಾಯಗಳ ಸದಸ್ಯರು. ಅವರು ಮಹೇಶ್ವರಿ ಸೀರೆಗಳನ್ನು ತಯಾರಿಸುವುದರಲ್ಲಿ ಅತ್ಯಂತ ಕುಶಲಿಗಳಾಗಿದ್ದಾರೆ. ಆದ್ದರಿಂದ ಇದು ಅವರ ಆದಾಯದ ಪ್ರಾಥಮಿಕ ಮೂಲವಾಗಿದೆ.
Click here to directly support these artisans on Flipkart.
ಬಾಗ್ ಪ್ರಿಂಟ್
ಮಧ್ಯಪ್ರದೇಶ
ಬಾಗ್ ಪ್ರಿಂಟ್ ಎಂಬುದು ಪಾಕೃತಿಕ ಬಣ್ಣಗಳನ್ನು ಬಳಸಿಕೊಂಡು ಕೈಯ ಅಚ್ಚುಗಳಿಂದ ತಯಾರಿಸುವ ಒಂದು ಪಾರಂಪರಿಕ ಕಲೆ. ಇದನ್ನು ಮಧ್ಯಪ್ರದೇಶದ ಧರ್ ಜಿಲ್ಲೆಯ ಬಾಗ್‌ನಲ್ಲಿ ಪಾಲಿಸಲಾಗುತ್ತದೆ. ಇದರ ಹೆಸರು ಬಾಗ್ ನದಿಯ ದಡದ ಮೇಲಿರುವ ಬಾಗ್ ಹಳ್ಳಿಯಿಂದ ಬಂದಿದೆ. ಬಾಗ್ ಪ್ರಿಂಟ್‌ನಲ್ಲಿ ಬಟ್ಟೆಯ ಮೇಲೆ ರೇಖಾಗಣಿತದ ಆಕಾರಗಳನ್ನು ಪುನರಾವರ್ತಿಸಲಾಗುತ್ತದೆ ಮತ್ತು ಹೂವಿನ ವಿನ್ಯಾಸಗಳಿರುತ್ತವೆ, ತರಕಾರಿಯಿಂದ ತೆಗೆದ ಕೆಂಪು ಮತ್ತು ಕಪ್ಪು ಬಣ್ಣಗಳು ಬಿಳಿಯ ಹಿನ್ನೆಲೆ ಮೇಲಿರುತ್ತವೆ. ಇದು ಒಂದು ಜನಪ್ರಿಯವಾದ ಬಟ್ಟೆಯ ಮೇಲೆ ಮುದ್ರಿಸಿರುವ ಉತ್ಪನ್ನ.
ತಯಾರಕರನ್ನು ಭೇಟಿ ಮಾಡಿ
ಮಧ್ಯಪ್ರದೇಶದ ಧರ್ ಜಿಲ್ಲೆಯ ಬಾಗ್‌ನಲ್ಲಿರುವ ಸಾವಿರಾರು ಕುಶಲಕರ್ಮಿಗಳು ಕೋವಿಡ್-೧೯ರಲಾಕ್ಡೌನ್‌ನಿಂದಾಗಿ ಬಹಳ ತೊಂದರೆಗೆ ಒಳಗಾದರು, ಏಕೆಂದರೆ ಅವರ ಪಾರಂಪರಿಕ ಅಚ್ಚು-ಮುದ್ರೆಯ ಬಟ್ಟೆಗೆ ಬೇಡಿಕೆ ಮತ್ತು ಮಾರಾಟ ನೆಲಕಚ್ಚಿತು. ಈ ಅಚ್ಚು ಮುದ್ರಣ ಕೆಲಸ ನೆರೆಹೊರೆಯ ಸುಮಾರು ೨೫ರಿಂದ ೩೦ ಹಳ್ಳಿಗಳಲ್ಲಿರುವ ಕಾರ್ಮಿಕರ ಬದುಕನ್ನು ಪೋಷಿಸುತ್ತದೆ. ಆ ಹಳ್ಳಿಗಳಲ್ಲಿ ಅಗರ್, ಉದಿಯಾಪುರ, ಮಹಾಕಲ್ಪುರ, ಘಟ್ಬೊರಿ, ಬಕಿ, ಕಡ್ವಲ್, ಪಿಪ್ರಿ ಮತ್ತು ರೈಸಿಂಗ್ಪುರ ಸೇರಿವೆ. ಅಲ್ಲಿನ ಜನ ಬಾಗ್‌ಗೆ ಕೆಲಸಕ್ಕಾಗಿ ಬರುತ್ತಾರೆ. ಬಾಗ್ ಅಚ್ಚು ಬಟ್ಟೆಯನ್ನು ತಯಾರಿಸುವುದರಲ್ಲಿ ತೊಡಗಿರುವ ಆದಿವಾಸಿ ಜನರ ಗುಂಪು ಮತ್ತು ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿರುವ ಅವರ ಕುಟುಂಬಗಳು ಅವರ ಜೀವನವನ್ನು ಸಾಗಿಸಲು ಅವರು ತಯಾರಿಸುವ ಕೈಯಿಂದ ಉತ್ಪನ್ನವಾದ ಸರಕುಗಳ ಮಾರಾಟದ ಮೇಲೆ ಸಂಪೂರ್ಣವಾಗಿ ಅವಲಂಬಿಸಿದ್ದಾರೆ.
ಫ್ಲಿಪ್ಕಾರ್ಟ್‌ನಲ್ಲಿ ಈ ಕುಶಲಕರ್ಮಿಗಳನ್ನು ನೇರವಾಗಿ ಬೆಂಬಲಿಸಲು ಇಲ್ಲಿ ಒತ್ತಿ.