ಬದಲಾವಣೆ ತಂದ ಕ್ಯಾನ್ವಾಸ್: ಪ್ರಾಚೀನ ಕಲಾ ಪ್ರಕಾರಗಳನ್ನು ಉಳಿಸಲು ಇ-ಕಾಮರ್ಸ್ ಬಳಸಿದ ಒಡಿಶಾದ ಕಲಾವಿದರು

Read this article in हिन्दी | English | বাংলা | தமிழ் | ગુજરાતી | मराठी | తెలుగు

ಎಷ್ಟೇ ಸವಾಲುಗಳು ಎದುರಾದರೂ ಸಹ ಭಾರತದ ಕಲಾತ್ಮಕ ಪರಂಪರೆಯನ್ನು ಸಂರಕ್ಷಿಸಲು, ಒಡಿಶಾದ ರಘುರಾಜಪುರ ಗ್ರಾಮದ ನಿವಾಸಿಗಳು ಇ-ಕಾಮರ್ಸ್ ಅನ್ನು ಬಳಸಿಕೊಳ್ಳುತ್ತಿದ್ದು, ಭಾರತದ ಪ್ರಾಚೀನ ಕಲಾ ಪ್ರಕಾರಗಳನ್ನು ದೇಶಾದ್ಯಂತ ಲಕ್ಷಾಂತರ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಧೃತಿಗೆಡದೆ, ಎಲ್ಲವನ್ನೂ ತಾಳ್ಮೆಯಿಂದ ಹೇಗೆ ಸಹಿಸಿಕೊಂಡರು ಮತ್ತು ಈಗ ತಮ್ಮ ಜೀವನೋಪಾಯಕ್ಕಾಗಿ ಫ್ಲಿಪ್‌ಕಾರ್ಟ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ವೀಕ್ಷಿಸಿ.

Odisha

ಡಿಶಾದ ಪುರಿ ಯಾತ್ರಾಸ್ಥಳದ ಬಳಿಯಿರುವ ರಘುರಾಜಪುರ ಗ್ರಾಮವು ಭಾರತದ ಕೆಲವು ಶ್ರೇಷ್ಠ ಕಲಾವಿದರಿಗೆ ನೆಲೆಯಾಗಿದ್ದು, ಕಾಲಾತೀತ ಪರಂಪರೆಯ ಕಲಾ ಪ್ರಕಾರಗಳನ್ನು ಉಳಿಸಿಕೊಳ್ಳುತ್ತಾ ಬಂದಿದೆ. ಗ್ರಾಮದಲ್ಲಿರುವ ಸುಮಾರು 120 ಮನೆಗಳಲ್ಲಿ ಪ್ರತಿಯೊಂದರಲ್ಲೂ ಒಬ್ಬ ಕಲಾವಿದನಿದ್ದು, ಅವರೆಲ್ಲರೂ ಭಾರತದ ಕೆಲವು ಪುರಾತನ ಕಲಾಪ್ರಕಾರಗಳನ್ನು ಪುನರುಜ್ಜೀವನಗೊಳಿಸಿ, ಆ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ, ಹೀಗಾಗಿ ಆ ಕಲೆ ಇಂದಿಗೂ ಜೀವಂತವಾಗಿದೆ.


ಒಡಿಶಾದಲ್ಲಿ ಬದಲಾವಣೆ ತಂದ ಕ್ಯಾನ್ವಾಸ್‌ ಅನ್ನು ವೀಕ್ಷಿಸಿ

YouTube player

 


ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರಿಸಲು ಈ ಸುಂದರವಾದ ಗ್ರಾಮದಲ್ಲಿನ ಎಲ್ಲಾ ಕುಟುಂಬಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿವೆ. ಕೆಲವರು 12 ನೇ ವಯಸ್ಸಿನಲ್ಲಿಯೇ ಈ ಕಸುಬನ್ನು ಪ್ರಾರಂಭಿಸುತ್ತಾರೆ, ಸಾಕಷ್ಟು ಸಾಂಪ್ರದಾಯಿಕ ಕಲಾ ಪ್ರಕಾರಗಳು ಅವರ ಕುಟುಂಬ ವೃಕ್ಷದಲ್ಲಿಯೇ ಅಡಕವಾಗಿವೆ. ಪಟ್ಟಚಿತ್ರ ಮತ್ತು ತಾಳಪತ್ರದಿಂದ ಹಿಡಿದು ಮರದ ಕೆತ್ತನೆಗಳು ಮತ್ತು ಟಸ್ಸಾರ್ ವರ್ಣಚಿತ್ರಗಳವರೆಗೆ, ಹೀಗೆ ಈ ಗ್ರಾಮದಲ್ಲಿರುವ ಪ್ರತಿಭೆಯ ಬಗ್ಗೆ ನಂಬಿಕೆ ಬರಬೇಕಂದರೆ ಅದನ್ನು ನೋಡಲೇಬೇಕು! ಎಂಥದ್ದೇ ಸಮಯದಲ್ಲಿಯೂ ಈ ಅಮೂಲ್ಯ ಸಂಸ್ಕೃತಿಯು ಅವರನ್ನು ಉಳಿಸುತ್ತದೆ ಎಂಬುದನ್ನು ಖಾತ್ರಿಪಡಿಸಲು ಭಾರತದ ಕೆಲವು ಪಾರಂಪರಿಕ ನೃತ್ಯ ಪ್ರಕಾರಗಳನ್ನು ಇಲ್ಲಿನ ಮನೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ.

ಈ ಕಲಾವಿದರಲ್ಲಿ ಅನೇಕರ ಜೀವನೋಪಾಯವು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ – ಆದರೆ ಇದು ಸಾಂಕ್ರಾಮಿಕ ರೋಗದ ಸಂದರ್ಭದದಿಂದಾಗಿ ಪ್ರವಾಸದ ಮೇಲೆ ಹೇರಿದ ನಿರ್ಬಂಧದಿಂದಾಗಿ ಬದಲಾಯಿತು. ಈ ಹಿಂದೆ ಜಗತ್ತಿನ ಮೂಲೆಮೂಲೆಗಳಿಂದ ಬರುತ್ತಿದ್ದ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಗ್ರಾಮವು, ಆರೋಗ್ಯದ ದೃಷ್ಟಿಯಿಂದ ಸುರಕ್ಷಿತರಾಗಿರಲು ಜಗತ್ತಿನಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದಾಗಿ ಮೌನವಾಯಿತು. ಪ್ರಯಾಣ ಸ್ಥಗಿತಗೊಂಡಂತೆ, ಅವರು ಶ್ರಮವಹಿಸಿ ರಚಿಸಿದ ಕಲೆಯ ಮಾರಾಟ ಮತ್ತು ಅವರ ಆದಾಯವೂ ಸ್ಥಗಿತಗೊಂಡಿತು.

ಏತನ್ಮಧ್ಯೆ ಕಲಾವಿದರನ್ನು ಬೆಂಬಲಿಸುವ ಅಗತ್ಯವನ್ನು ಅರಿತ ಸ್ಟೇಟ್ ಇನ್‌ಸ್ಟಿಟ್ಯೂಟ್ ಫಾರ್ ಡೆವಲಪ್‌ಮೆಂಟ್ ಆಫ್ ಆರ್ಟ್ಸ್ ಮತ್ತು amp; ಕ್ರಾಫ್ಟ್ಸ್ (SIDAC) ಮತ್ತು ಫ್ಲಿಪ್‌ಕಾರ್ಟ್ ಸಮರ್ಥ್ ಅವರನ್ನು ಇ-ಕಾಮರ್ಸ್ಗೆ ಪರಿಚಯಿಸುವ ಮೂಲಕ ಇಲ್ಲಿನ ಕೆಲವು ಪ್ರತಿಭೆಗಳನ್ನು ಲಕ್ಷಾಂತರ ಜನರಿಗೆ ತಲುಪಿಸುವಲ್ಲಿ ಮಾತ್ರವಲ್ಲದೆ ಕೋವಿಡ್‌ ಪಿಡುಗಿನ ಸಂದರ್ಭದಲ್ಲಿಯೂ ಸಹ ಸುಸ್ಥಿರ ಜೀವನವನ್ನು ನಡೆಸಲು ವೇದಿಕೆಯನ್ನು ಒದಗಿಸಿದೆ.

ಫ್ಲಿಪ್‌ಕಾರ್ಟ್‌ ಮತ್ತು ಪ್ಯಾನ್-ಇಂಡಿಯಾ ಪ್ರವೇಶದ ಜೊತೆಗೆ ಒಡಿಶಾದ ಗ್ರಾಹಕರು, ಕಲಾಕಾರರು, ನೇಕಾರರು ಮತ್ತು ಕುಶಲಕರ್ಮಿಗಳು ತಮ್ಮ ಅದ್ಭುತ ಕಲಾಕೌಶಲ್ಯವನ್ನು ಪ್ರದರ್ಶಿಸಲು ರಾಷ್ಟಮಟ್ಟದ ವೇದಿಕೆಯನ್ನೇ ಹೊಂದಿದ್ದಾರೆ. ಅನೇಕರಿಗೆ, ಈ ತಲುಪುವಿಕೆಯು ಭಾರತದ ಈ ಕಲಾ ಪ್ರಕಾರಗಳ ಉಳಿವನ್ನು ಖಾತ್ರಿಗೊಳಿಸುತ್ತದೆ ಮತ್ತು ಇತರರಿಗೆ ಭರವಸೆಯನ್ನು ಪ್ರೇರೇಪಿಸುತ್ತದೆ. ಅಲ್ಲದೆ, ಯಾವುದೇ ಮಿತಿಗಳಿಲ್ಲದೆ ಅವರ ಸೃಜನಶೀಲತೆಯನ್ನು ಅತ್ಯುತ್ತಮಗೊಳಿಸಲು ಇದು ಅನುವು ಮಾಡಿಕೊಡುತ್ತದೆ.


ಇದನ್ನೂ ವೀಕ್ಷಿಸಿ: ಅನ್‌ಬಾಕ್ಸ್‌ ಮಾಡಲಾದ ಲಾಜಿಸ್ಟಿಕ್ಸ್: ಭಾರತದ ಅತ್ಯಂತ ಬೃಹತ್‌ ಗೋದಾಮು

Enjoy shopping on Flipkart