2030 ರ ವೇಳೆಗೆ 100% ಎಲೆಕ್ಟ್ರಿಕ್‌ ಮೊಬಿಲಿಟಿ – EV100 ನೊಂದಿಗೆ ಸುಸ್ಥಿರತೆಯತ್ತ ಫ್ಲಿಪ್‌ಕಾರ್ಟ್ ಹೆಜ್ಜೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಕ್ಲೈಮೇಟ್ ಗ್ರೂಪ್‌ನ ಜಾಗತಿಕ ಎಲೆಕ್ಟ್ರಿಕ್ ಮೊಬಿಲಿಟಿ ಇನಿಶಿಯೇಟಿವ್ EV100 ನ ಸದಸ್ಯ ಕಂಪನಿಯಾಗಿ, ಫ್ಲಿಪ್‌ಕಾರ್ಟ್ 2030 ರ ವೇಳೆಗೆ ಗ್ರಾಹಕರನ್ನು ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸಲು ಬದ್ಧವಾಗಿದ್ದು, ಭಾರತದ ಮಹತ್ವಾಕಾಂಕ್ಷೆಯ 2030 ಎಲೆಕ್ಟ್ರಿಕ್ ಮೊಬಿಲಿಟಿ ಯೋಜನೆಯಡಿ 1400+ ಕೊನೆಯ ಹಂತದ ಕೇಂದ್ರಗಳ ಬಳಿ ಸಿಬ್ಬಂದಿ ಚಾರ್ಜಿಂಗ್ ಅನ್ನು ಸ್ಥಾಪಿಸಲು ಸೇವಾ ಪೂರೈಕೆದಾರರನ್ನು ಪ್ರೇರೇಪಿಸುತ್ತಿದೆ. 2019 ರಲ್ಲಿ ಭಾರತೀಯ ನಗರಗಳಲ್ಲಿ ಪೈಲಟ್‌ಗಳೊಂದಿಗೆ ಪ್ರಾರಂಭವಾದ ಎಲೆಕ್ಟ್ರಿಕ್ ಮೊಬಿಲಿಟಿ ಕಡೆಗೆ ಫ್ಲಿಪ್‌ಕಾರ್ಟ್ ಗ್ರೂಪ್‌ನ ಚಾಲನೆಯು ಈಗ ಪ್ರಮುಖ ಸುಸ್ಥಿರತೆಯ ಉಪಕ್ರಮವಾಗಿದೆ ಮತ್ತು ಭಾರತಕ್ಕೆ ಪ್ರಮುಖ ಹೆಜ್ಜೆಯಾಗಿದೆ. ಸುಸ್ಥಿರ, ಸಮಾನ ಮತ್ತು ಅಂತರ್ಗತ ಇ-ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ರಚಿಸುವ ನಮ್ಮ ಬದ್ಧತೆಯಲ್ಲಿ ನಾವು ಎಷ್ಟು ಮುಂದುವರೆದಿದ್ದೇವೆ ಎಂಬುದನ್ನು ತಿಳಿಯಲು ಇನ್ನಷ್ಟು ಓದಿ.

Flipkart Electric Mobility EV 100

2020ರಲ್ಲಿ, ಅಂದರೆ ತನ್ನ ಎಲೆಕ್ಟ್ರಿಕ್ ವಾಹನಗಳ ವಿತರಣೆಯನ್ನು ವಿಸ್ತರಿಸಲು ಪ್ರತಿಜ್ಞೆ ಮಾಡಿದ ಒಂದು ವರ್ಷದ ನಂತರ ತನ್ನ ಗ್ರಾಹಕರಿಗೆ ತಲುಪಿಸುವ ಕಾರ್ಯದಲ್ಲಿ, 2030 ರ ವೇಳೆಗೆ ತನ್ನ ಸರಕುಗಳ ವಿತರಣೆಯನ್ನು‌ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸುವುದಾಗಿ ಘೋಷಿಸಿದ ಫ್ಲಿಪ್‌ಕಾರ್ಟ್‌ ತನ್ನ ಇ-ಕಾಮರ್ಸ್ ಮೌಲ್ಯ ಸರಪಳಿಯಲ್ಲಿ ದೀರ್ಘಾವಧಿಯ ಸುಸ್ಥಿರತೆಯ ಬದ್ಧತೆಯನ್ನು ಪ್ರದರ್ಶಿಸಿತು. ಈ ದೃಢ ನಿರ್ಧಾರವು ಫ್ಲಿಪ್‌ಕಾರ್ಟ್ ಅನ್ನು ಭಾರತದಲ್ಲಿನ ಮೊದಲ ಇ-ಕಾಮರ್ಸ್ ಸಂಸ್ಥೆಯನ್ನಾಗಿ ಮಾಡಿತು ಮಾತ್ರವಲ್ಲದೆ, ಇದುದಿ ಕ್ಲೈಮೇಟ್‌ ಗ್ರೂಪ್‌ನ EV100 ಉಪಕ್ರಮದೊಂದಿಗೆ ಕೈಜೋಡಿಸುವಂತೆ ಮಾಡಿತು. ದಿ ಕ್ಲೈಮೇಟ್ ಗ್ರೂಪ್‌ನ ಜಾಗತಿಕ ಎಲೆಕ್ಟ್ರಿಕ್ ಮೊಬಿಲಿಟಿ ಉಪಕ್ರಮವಾದ EV100, ಎಲೆಕ್ಟ್ರಿಕ್ ವಾಹನಗಳಿಗೆ (EVs) ಪರಿವರ್ತನೆಗೊಳ್ಳುವುದನ್ನು ವೇಗಗೊಳಿಸಲು ಮತ್ತು 2030 ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಿಸಲು ಬದ್ಧವಾಗಿರುವ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತದೆ.


ಕಥೆ ಇಷ್ಟವಾಯಿತೇ? ಜೊತೆಯಲ್ಲಿರುವ ಪಾಡ್‌ ಕಾಸ್ಟ್‌ ಅನ್ನು ಇಲ್ಲಿ ಆಲಿಸಿ:


ದೀರ್ಘಾವಧಿಯ ಸುಸ್ಥಿರತೆಗಾಗಿ ಈ ಬದ್ಧತೆಯನ್ನು ನಿಯೋಜಿಸಲು, ಫ್ಲಿಪ್‌ಕಾರ್ಟ್ ತನ್ನ ವಿತರಣೆಯಲ್ಲಿ ಹಂತಹಂತವಾಗಿ ಎಲೆಕ್ಟ್ರಿಕ್ ವಾಹನಗಳ ಸಮಗ್ರೀಕರಣವನ್ನು ಕಾರ್ಯಗತಗೊಳಿಸುವುದನ್ನು ಮುಂದುವರೆಸುತ್ತಿದೆ. ಜೊತೆಗೆ ತನ್ನ 1400ಕ್ಕೂ ಅಧಿಕ ವಿತರಣಾ‌ ಹಬ್‌ಗಳ ಬಳಿ ಸಿಬ್ಬಂದಿ ಚಾರ್ಜಿಂಗ್ ಪಾಯಿಂಟ್‌ ಸ್ಥಾಪಿಸಲು ಉತ್ತೇಜಿಸುತ್ತಿದೆ. ಅಷ್ಟೇ ಅಲ್ಲದೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯುತ್ ವಾಹನಗಳನ್ನು ಬಳಸುವಂತೆ ವಿತರಣಾ ಕಾರ್ಯನಿರ್ವಾಹಕರನ್ನು ಉತ್ತೇಜಿಸುತ್ತಿದೆ.

ಕೇವಲ 2 ವರ್ಷಗಳ ನಂತರ, ಫ್ಲಿಪ್‌ಕಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿಯು 100% ಪರಿವರ್ತನೆಯ ಹಾದಿಯಲ್ಲಿದೆ (ಭಾರತದ 2030 ರ ಎಲೆಕ್ಟ್ರಿಕ್ ಮೊಬಿಲಿಟಿ ಮಹತ್ವಾಕಾಂಕ್ಷೆಗೆ ಅನುಗುಣವಾಗಿ). 2022 ರ ಹೊತ್ತಿಗೆ, ಫ್ಲಿಪ್‌ಕಾರ್ಟ್‌ನ ಡೆಲಿವರಿ ಹಂತದಲ್ಲಿ 3600ಕ್ಕೂ ಅಧಿಕ EV ಗಳನ್ನು ಹೊಂದಿದ್ದು, 2021 ಕ್ಕಿಂತ 40% ಹೆಚ್ಚಳವಾಗಿದೆ.

ಇಂದು, ಫ್ಲಿಪ್‌ಕಾರ್ಟ್‌ನ ಹೊರಗುತ್ತಿಗೆ ವಿತರಣಾ ಕೇಂದ್ರಗಳೂ ಸಹ 85% ಸರಕುಗಳ ವಿತರಣೆಗಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿಯೇ ಕಾರ್ಯನಿರ್ವಹಿಸುತ್ತವೆ. ನಮ್ಮ ದಿನಸಿ ಸರಬರಾಜು ಸರಪಳಿಯು 1000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಿದೆ, ದೇಶಾದ್ಯಂತ ನಮ್ಮ ಗ್ರಾಹಕರಿಗೆ ಸಂತೋಷವನ್ನು ಸಮರ್ಥವಾಗಿ ತಲುಪಿಸುತ್ತದೆ. 2022 ರಲ್ಲಿ, ಹಬ್ಬದ ಸೀಸನ್‌ನಲ್ಲಿ, 2,000 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಭಾರತದಾದ್ಯಂತ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಗ್ರಾಹಕರ ಆರ್ಡರ್‌ಗಳನ್ನು ವಿತರಿಸಿದವು – ವಿತರಣಾ ದರವು ಆಂತರಿಕ ದಹನಕಾರಿ ಎಂಜಿನ್ (ICE) ವಾಹನಗಳಿಗೆ ಸರಿಸಮ ಆಗಿರುವುದರಿಂದ ಇದು ಸಣ್ಣ ಸಾಧನೆಯೇನಲ್ಲ. ಫ್ಲಿಪ್‌ಕಾರ್ಟ್ ಗ್ರೂಪ್ ಮತ್ತು ಭಾರತದಾದ್ಯಂತ ಅದರ ಹಬ್‌ಗಳು ಈ ಪ್ರಗತಿಯನ್ನು ಸಾಧಿಸಲು ಮತ್ತು ಸುಸ್ಥಿರ, ಸಮಾನ ಮತ್ತು ಅಂತರ್ಗತ ಇ-ಕಾಮರ್ಸ್ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ.

ಇಲ್ಲಿಯವರೆಗಿನ ನಮ್ಮ ಪ್ರಗತಿಯ ನೋಟ ಇಲ್ಲಿದೆ:

electric mobility

ಫ್ಲಿಪ್‌ಕಾರ್ಟ್ ಭಾರತದಲ್ಲಿನ ಎಲೆಕ್ಟ್ರಿಕ್ ಮೊಬಿಲಿಟಿಯ ಟ್ರೆಂಡ್‌ಸೆಟರ್

ಫ್ಲಿಪ್‌ಕಾರ್ಟ್ ಗ್ರೂಪ್ 2018 ರಲ್ಲಿ ಫ್ಲೀಟ್‌ ವಾಹನಗಳ ವಿದ್ಯುದೀಕರಣಕ್ಕಾಗಿ ಪರಿವರ್ತನೆಯನ್ನು ಪ್ರಾರಂಭಿಸಿತಲ್ಲದೆ, ಫ್ಲೀಟ್ ಲಾಜಿಸ್ಟಿಕ್ಸ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವ್ಯಾಪಕವಾದ ಬೇಡಿಕೆಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2019 ರಲ್ಲಿ ಇ-ಬೈಕ್‌ಗಳು ಮತ್ತು ಇ-ವ್ಯಾನ್‌ಗಳನ್ನು ಆರಂಭಿಸುವ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯ ಆರಂಭಿಕ ಅಳವಡಿಕೆದಾರರಾಗಿ, ಫ್ಲಿಪ್‌ಕಾರ್ಟ್ ಈ ಪ್ರಯಾಣವನ್ನು ಪ್ರಾರಂಭಿಸಿದ ಉದ್ಯಮಗಳಲ್ಲಿ ಮೊದಲ ಉದ್ಯಮವಾಗಿದ್ದು, ಪ್ರಭಾವಶಾಲಿ ಕಾರ್ಯಕ್ಷಮತೆಯ ಫಲಿತಾಂಶಗಳೊಂದಿಗೆ ಎಲೆಕ್ಟ್ರಿಕ್‌ ವಾಹನಗಳ ಪೈಲಟ್ ಕಾರ್ಯಕ್ರಮಗಳಲ್ಲಿ ಸಾಕ್ಷಿಯಾಗಿದೆ. ಫ್ಲಿಪ್‌ಕಾರ್ಟ್ ಪ್ರಸ್ತುತ ದೆಹಲಿ, ಹೈದರಾಬಾದ್, ಜೈಪುರ ಮತ್ತು ಭುವನೇಶ್ವರದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ನಿಯೋಜಿಸಿದೆ ಮತ್ತು ನಾವು ನಮ್ಮ ಎಲೆಕ್ಟ್ರಿಕ್‌ ವಾಹನಗಳ ಫ್ಲೀಟ್ ಅನ್ನು ಪುಣೆ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಲಕ್ನೋದಲ್ಲಿಯೂ ವಿಸ್ತರಿಸುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ನಿಯೋಜಿಸಲು ಮತ್ತು ತಡೆರಹಿತ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಫ್ಲಿಪ್‌ಕಾರ್ಟ್ ಈಗಾಗಲೇ ಆಯ್ಕೆಮಾಡಿದ ಕೇಂದ್ರಗಳಲ್ಲಿ ಅಗತ್ಯ ಚಾರ್ಜಿಂಗ್ ಮೂಲಸೌಕರ್ಯವನ್ನೂ ಸಹ ಸ್ಥಾಪಿಸಿದೆ.

“ಒಂದು ಸ್ವದೇಶಿ ಕಂಪನಿಯಾಗಿ, ಸಮುದಾಯಗಳು ಮತ್ತು ಗ್ರಾಹಕರನ್ನು ಒಳಗೊಂಡಿರುವ ನಮ್ಮ ಎಲ್ಲಾ ಪಾಲುದಾರರಿಗೆ ಇ-ಕಾಮರ್ಸ್ ಅನ್ನು ಹೆಚ್ಚು ಒಳಗೊಳ್ಳುವ, ಪ್ರಗತಿಪರ ಮತ್ತು ಪ್ರಭಾವಶಾಲಿಯಾಗಿ ಮಾಡುವಲ್ಲಿ ನಾವು ಯಾವಾಗಲೂ ಹೆಮ್ಮೆಪಡುತ್ತೇವೆ” ಎಂದು ಫ್ಲಿಪ್‌ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದರು.“ಕ್ಲೈಮೇಟ್ ಗ್ರೂಪ್‌ನ EV100 ಉಪಕ್ರಮಕ್ಕೆ ನಾವು ಬದ್ಧರಾಗಿದ್ದು ಪರಿಸರದ ಸುಸ್ಥಿರತೆಯ ದೂರದೃಷ್ಟಿಯೊಂದಿಗೆ ಸಂಬಂಧ ಹೊಂದಿದೆ ಮತ್ತು EV100 ಪರಿಸರ ವ್ಯವಸ್ಥೆಯ ಭಾಗವಾಗಿ ದೂರಾಲೋಚನೆಯು ನಮಗೆ ಜಾಗತಿಕ ದೃಷ್ಟಿಕೋನಗಳಿಂದ ಕಲಿಯಲು ಅವಕಾಶ ನೀಡುತ್ತದೆ. ನಮ್ಮ ವಿಸ್ತರಣೆ ಮತ್ತು ವ್ಯಾಪ್ತಿಯೊಂದಿಗೆ, ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಕೆಯನ್ನು ವೇಗವಾಗಿ ಪತ್ತೆಹಚ್ಚುವಲ್ಲಿ ಮಾತ್ರವಲ್ಲದೆ ಪರಿಸರ ವ್ಯವಸ್ಥೆಯೊಳಗಿನ ಪ್ರಮುಖ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಕ್ಲೀನ್ ಮೊಬಿಲಿಟಿ ಮುಖ್ಯವಾಹಿನಿಯಲ್ಲೂ ಮಹತ್ವದ ಪಾತ್ರವಹಿಸಬಹುದು ಎಂಬುದರಲ್ಲಿ ನಮಗೆ ನಂಬಿಕೆಯಿದೆ.

 

ಲಾಜಿಸ್ಟಿಕ್ಸ್ ಫ್ಲೀಟ್‌ನ ವಿದ್ಯುದೀಕರಣವು ಫ್ಲಿಪ್‌ಕಾರ್ಟ್‌ನ ಸುಸ್ಥಿರತೆಯ ಗುರಿಯ ಪ್ರಮುಖ ಭಾಗವಾಗಿದೆ ಮತ್ತು EV100 ಬದ್ಧತೆಯು ಪರಿಸರ ಲಾಜಿಸ್ಟಿಕ್ಸ್ ಫ್ಲೀಟ್ ಅನ್ನು ನಿರ್ಮಿಸುವ ಪ್ರಯತ್ನಗಳನ್ನೂ ಒಳಗೊಂಡಿದೆ.
“ಇ-ಕಾಮರ್ಸ್ ವಲಯವು ಸುಸ್ಥಿರ, ಅಂತರ್ಗತ ಮತ್ತು ಸಮಾನ ಪರಿಸರ ವ್ಯವಸ್ಥೆಯತ್ತ ಬದಲಾವಣೆಯನ್ನು ಪ್ರೇರೇಪಿಸುವಲ್ಲಿ ವಿಶಿಷ್ಟ ಸ್ಥಾನದಲ್ಲಿದ್ದು, ಹೆಚ್ಚು ಸುಸ್ಥಿರ ಆರ್ಥಿಕತೆಗೆ ಪರಿವರ್ತನೆಯಾಗಬೇಕೆನ್ನುವ ಭಾರತದ ಮಹತ್ವಾಕಾಂಕ್ಷೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ” ಎಂದು ಫ್ಲಿಪ್‌ಕಾರ್ಟ್ ಗ್ರೂಪ್‌ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಹೇಳಿದ್ದಾರೆ. “ಗ್ರಾಹಕರಿಗೆ ಸರಕುಗಳ ವಿತರಣೆಗಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಸುವುದು ಮತ್ತು ಕ್ರಮೇಣ ಮೊದಲ ಮತ್ತು ಮಧ್ಯಮ ವಿತರಣಾ ಹಂತದಲ್ಲಿ ಕೂಡ ಅದನ್ನೇ ಅನುಸರಿಸುವುದು ಒಂದು ದಿಟ್ಟ ಹೆಜ್ಜೆಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಪರಿವರ್ತನೆಯನ್ನು ಮುನ್ನಡೆಸುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ, EV ಪರಿಸರ ವ್ಯವಸ್ಥೆಯಲ್ಲಿ ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸಲು ಮತ್ತು ಎಲ್ಲರಿಗೂ ಸಮನಾದ ಮೌಲ್ಯವನ್ನು ರಚಿಸುವಲ್ಲಿ ನಾವು ಸಮರ್ಥರಾಗಿದ್ದೇವೆ.”

ಕಳೆದ 2 ವರ್ಷಗಳಲ್ಲಿ, ಫ್ಲಿಪ್‌ಕಾರ್ಟ್ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಚಾರ್ಜಿಂಗ್ ಪೂರೈಕೆದಾರರು, ನಿಯಂತ್ರಕರು, ರಾಜಕಾರಣಿಗಳು, ಕೌಶಲ್ಯ ಅಭಿವೃದ್ಧಿ ಏಜೆನ್ಸಿಗಳು, ಸಂಗ್ರಾಹಕರು ಮತ್ತು OEM ಗಳಾದ್ಯಂತ ಪರಿಸರ ವ್ಯವಸ್ಥೆಯ ಪಾಲುದಾರರ ವ್ಯಾಪಕ ಜಾಲವನ್ನು ರಚಿಸಲು ಸಾಕಷ್ಟು ಕೆಲಸ ಮಾಡಿದೆ. ಇದು ಇ-ಕಾಮರ್ಸ್‌ಗಾಗಿ ಆಪ್ಟಿಮೈಸ್ ಮಾಡಲಾದ ಎಲೆಕ್ಟ್ರಿಕ್‌ ವಾಹನಗಳ ವಿನ್ಯಾಸ ಮತ್ತು ತಯಾರಿಕೆಯನ್ನೂ ಒಳಗೊಂಡಿದ್ದು, ಎಲೆಕ್ಟ್ರಿಕ್‌ ವಾಹನಗಳು ಪ್ರಮುಖ ಮೊಬಿಲಿಟಿ ಪರಿಹಾರವಾಗಿ ಹೊರಹೊಮ್ಮಲು ಎಲೆಕ್ಟ್ರಿಕ್‌ ವಾಹನಗಳಿಗೆ ಮಾರುಕಟ್ಟೆ ಬೇಡಿಕೆಯನ್ನು ಹೆಚ್ಚಿಸಲು ಅದನ್ನು ಬೆಂಬಲಿಸುವುದನ್ನೂ ಒಳಗೊಂಡಿದೆ.

ಕ್ಲೈಮೇಟ್ ಗ್ರೂಪ್‌ನ ಭಾರತದ ಕಾರ್ಯನಿರ್ವಾಹಕ ನಿರ್ದೇಶಕಿಯಾದ ದಿವ್ಯಾ ಶರ್ಮಾಅವರು, “ಫ್ಲಿಪ್‌ಕಾರ್ಟ್ EV100 ಗೆ ಸಹಿ ಮಾಡುವುದನ್ನು ಮತ್ತು ಭಾರತದಲ್ಲಿ ಇ-ಕಾಮರ್ಸ್ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದನ್ನು ಮುನ್ನಡೆಸಲು ಕ್ಲೈಮೇಟ್ ಗ್ರೂಪ್‌ ನಿಜಕ್ಕೂ ಥ್ರಿಲ್ ಆಗಿದೆ. ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ತರುವಲ್ಲಿ ಮತ್ತು ನಮ್ಮ ಜಾಗತಿಕ ಬದ್ಧ ವ್ಯವಹಾರಗಳ ಜಾಲದಲ್ಲಿ ಇ-ಮೊಬಿಲಿಟಿ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಫ್ಲಿಪ್‌ಕಾರ್ಟ್‌ ಮಹತ್ವದ ಪಾತ್ರವನ್ನು ವಹಿಸುತ್ತದೆ. ತ್ವರಿತ ಹೊರಸೂಸುವಿಕೆ ಕಡಿತವನ್ನು ಮಾಡಲು ಮತ್ತು ದೀರ್ಘಾವಧಿಗೆ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಹಾಯ ಮಾಡಲು, ನಾವು ಇನ್ನಷ್ಟು ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವಂತೆ ಭಾರತೀಯ ಕಂಪನಿಗಳನ್ನು ಒತ್ತಾಯಿಸುವ ಮೂಲಕ ಆದಷ್ಟು ಬೇಗ ಎಲೆಕ್ಟಿಕ್‌ ವಾಹನಗಳ ಬಳಕೆಯ ಬಗ್ಗೆ ನೀತಿ ರಚನಾಕಾರರಿಗೆ ಪ್ರಬಲ ಸಂಕೇತ ಕಳುಹಿಸುತ್ತೇವೆ.

ಫ್ಲಿಪ್‌ಕಾರ್ಟ್‌ನ ಎಲೆಕ್ಟಿಕ್‌ ಮೊಬಿಲಿಟಿ ಪಯಣ

ಎಲೆಕ್ಟ್ರಿಕ್ ಮೊಬಿಲಿಟಿ ಪಯಣದಲ್ಲಿ ಫ್ಲಿಪ್‌ಕಾರ್ಟ್‌ನ ಆರಂಭಿಕ ಪ್ರಯತ್ನಗಳು ಭಾರತದ ನಗರಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಯಿತು, ಮೊದಲು ಇ-ಬೈಕ್‌ಗಳೊಂದಿಗೆ, ನಂತರ ಎಲೆಕ್ಟ್ರಿಕ್ ವ್ಯಾನ್‌ಗಳು ಅಥವಾ ಇ-ವಾನ್‌ಗಳೊಂದಿಗೆ ಆರಂಭವಾಯಿತು. ಆರಂಭದಲ್ಲಿ ಮುಂಬೈನಲ್ಲಿ ಮೂರು ತಿಂಗಳ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭವಾದ ನಂತರ, ಫ್ಲಿಪ್‌ಕಾರ್ಟ್‌ನ ಇ-ಬೈಕ್‌ ಪ್ರಯೋಗ ಯಶಸ್ವಿಯಾಗಿ, ಉಪಕ್ರಮದಿಂದ ಪರಿಸರದ ಮೇಲಾದ ಪರಿಣಾಮವನ್ನು ಬೆಳಕಿಗೆ ತಂದಿತು. ಜೂನ್ 2019 ರಲ್ಲಿ, ಎಲೆಕ್ಟ್ರಿಕ್ ಮೊಬಿಲಿಟಿ ಉಪಕ್ರಮವನ್ನು ದೆಹಲಿ ಮತ್ತು ಹೈದರಾಬಾದ್‌‌ಗೆ ವಿಸ್ತರಿಸಲಾಯಿತು. 2020 ರಲ್ಲಿ, ಫ್ಲಿಪ್‌ಕಾರ್ಟ್ ದೆಹಲಿ, ಹೈದರಾಬಾದ್, ಜೈಪುರ, ಭುವನೇಶ್ವರ, ಪುಣೆ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಮತ್ತು ಲಕ್ನೋಗಳಿಗೆ ಕಾರ್ಯಾಚರಣೆಯನ್ನು ವಿಸ್ತರಿಸಿದೆ.

ಜಾಗತಿಕವಾಗಿ ಗುರುತಿಸಲ್ಪಟ್ಟ EV100 ಉಪಕ್ರಮಕ್ಕೆ ಸೇರುವ ಭಾರತದಲ್ಲಿನ ಮೊದಲ ಇ-ಕಾಮರ್ಸ್ ಸಂಸ್ಥೆಯಾಗಿ, ಫ್ಲಿಪ್‌ಕಾರ್ಟ್‌ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉನ್ನತಿಗಾಗಿ ಕಾರ್ಪೊರೇಟ್ ನಾಯಕತ್ವವನ್ನು ಚುರುಕುಗೊಳಿಸಲು ಮತ್ತಷ್ಟು EV100 ನ ಗುರಿಯನ್ನು ಹೊಂದಿದೆ.

ಫ್ಲಿಪ್‌ಕಾರ್ಟ್ ತನ್ನ ವ್ಯಾಪಾರ ಮತ್ತು ಮೌಲ್ಯ ಸರಪಳಿಯಲ್ಲಿ ಸುಸ್ಥಿರ ಅಭ್ಯಾಸಗಳನ್ನು ಬೆಳೆಸುವ ಗುರಿಯನ್ನು ಹೊಂದಿದ್ದು, ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಉಪಕ್ರಮಗಳಿಗೆ ಚಾಲನೆ ನೀಡುತ್ತಿದೆ. ಫ್ಲಿಪ್‌ಕಾರ್ಟ್ ತನ್ನ ಪೂರೈಕೆ ಸರಪಳಿಯಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ಕಡಿಮೆ ಮಾಡಲು ಬದ್ಧವಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಬಳಕೆಯಲ್ಲಿ 51% ಕಡಿತವನ್ನು ಸಾಧಿಸಿದೆ. ಫ್ಲಿಪ್‌ಕಾರ್ಟ್ ಉದ್ಯಮ-ಮೊದಲ ಇಪಿಆರ್‌ ಅಧಿಕಾರವನ್ನು ಹೊಂದಿರುವ ಏಕೈಕ ಇ-ಕಾಮರ್ಸ್ ಕಂಪನಿಯಾಗಿದ್ದು, ಅಲ್ಲಿ ನಾವು ಬಳಸುವ ಪ್ಯಾಕೇಜಿಂಗ್‌ನ ಸಂಪೂರ್ಣ ತೂಕವನ್ನು ಮರಳಿ ಸಂಗ್ರಹಿಸಲು ನಾವು ಬದ್ಧರಾಗಿದ್ದೇವೆ.

ಫ್ಲಿಪ್‌ಕಾರ್ಟ್ ತನ್ನ ವಿದ್ಯುತ್‌ ಅಗತ್ಯತೆಗಳಿಗಾಗಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಒಟ್ಟಾರೆ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸಲು ಯೋಜನೆಗಳನ್ನು ಪರಿಚಯಿಸುವ ಮೂಲಕ ತನ್ನ ಕಾರ್ಯಾಚರಣೆಯೊಳಗೆ ಸಂಪನ್ಮೂಲ ದಕ್ಷತೆಯ ಮೇಲೆ ಕೇಂದ್ರೀಕರಿಸಿದೆ, ಜೊತೆಗೆ ತನ್ನ ಗೋದಾಮುಗಳಲ್ಲಿ ತ್ಯಾಜ್ಯನೀರಿನ ಶೂನ್ಯ ದ್ರವ ವಿಸರ್ಜನೆಯನ್ನು ಉತ್ತೇಜಿಸುತ್ತದೆ. ಇದರ ಕಾರ್ಯತಂತ್ರದ ಸೌಲಭ್ಯಗಳು ISO 14001 ಪ್ರಮಾಣೀಕರಣವನ್ನು ಪಡೆದಿವೆ, ಕೆಲಸದ ಸ್ಥಳದಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸನ್ನದ್ಧತೆಗೆ ನಿರ್ಣಾಯಕ ಮಾನದಂಡವಾಗಿದೆ. ಫ್ಲಿಪ್‌ಕಾರ್ಟ್‌ನ ಹೈದರಾಬಾದ್‌ನಲ್ಲಿರುವ ಡೇಟಾ ಸೆಂಟರ್ ಹೆಚ್ಚಾಗಿ ನವೀಕರಿಸಬಹುದಾದ ಶಕ್ತಿ ಮತ್ತು ಅದರ ಅನೇಕ ದೊಡ್ಡ ಗೋದಾಮಿನ ಯೋಜನೆಗಳನ್ನು ಐಜಿಬಿಸಿಯ ಗ್ರೀನ್ ಬಿಲ್ಡಿಂಗ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ.


ಇದನ್ನೂ ಓದಿ

ಫ್ಲಿಪ್‌ಕಾರ್ಟ್ ತನ್ನ ಫ್ಲೀಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪ್ರಾಯೋಗಿಕವಾಗಿ ಬಳಸುತ್ತದೆ

ಫ್ಲಿಪ್‌ಕಾರ್ಟ್ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಗುರಿ ಹೊಂದಿದೆ

Enjoy shopping on Flipkart