ಒಂದು #ಭಾರತದಲ್ಲಿ ತಯಾರಿಸಿದ್ದರ ಕತೆ : ಮಥುರಾದಲ್ಲಿ ಪೀಯೂಷ್‌ ಅಗರ್ವಾಲ್‌ ಕಷ್ಟವಾದ ಸಮಯವನ್ನು ದಾಟಲು ಈ-ಕಾಮರ್ಸ್‌ನ್ನು ಸ್ವೀಕರಿಸಿದರು

Read this article in हिन्दी | English | বাংলা | தமிழ் | ગુજરાતી | मराठी | తెలుగు

ತಮಗೆ ಎಷ್ಟು ನೆನಪಿಸಿಕೊಳ್ಳು ಸಾಧ್ಯವೊ ಅಷ್ಟು ನೆನಪಿಸಿಕೊಂಡಾಗ ಪೀಯೂಷ್‌ ಅಗರ್ವಾಲ್‌ ಅವರಿಗೆ ತಾನೊಬ್ಬ ಉದ್ಯಮಿಯಾಗಬೇಕೆಂದಷ್ಟೆ ಇದ್ದದ್ದು ನೆನಪಿನಲ್ಲಿತ್ತು. ಅವರು ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸದಲ್ಲಿದ್ದದ್ದು ಅವರಿಗೆ ತೃಪ್ತಿ ತರಲಿಲ್ಲ, ಅವರು ಮಹಾಮಾರಿಯ ಸಮಯದಲ್ಲಿ ತಮ್ಮ ತವರೂರಿಗೆ ಮರಳಿದಾಗ ಅವರಲ್ಲಿ ಒಂದು ಕಿಡಿ ಹೊತ್ತಿಕೊಂಡು ಅವರ ಭವಿಷ್ಯವನ್ನು ಪುನರ್ನಿರ್ಮಿಸಿತು. ಅವರು ತಮ್ಮ ಕನಸನ್ನು ಈಗ ಹೇಗೆ ನನಸಾಗಿಸಿದ್ದಾರೆ ಎಂದು ತಿಳಿಯಲು ಮುಂದೆ ಓದಿ!

entrepreneur

ತ್ತರ ಪ್ರದೇಶದ ಮಥುರಾಗೆ ಸೇರಿದ ಪೀಯೂಷ್‌ ಅಗರ್ವಾಲ್ಗೆ ತಾವು ಒಬ್ಬ ಉದ್ಯಮಿಯಾಗು ಸಾಮರ್ಥ್ಯ ಅವರಲ್ಲಿದೆ ಎಂದು ತಿಳಿದಿತ್ತು. ಇದು ಹೇಗೆ ಅಥವ ಯಾವಾಗ ವಾಸ್ತವವಾಗುತ್ತದೆ ಎಂದು ಗೊತ್ತಿಲ್ಲದಿದ್ದರಿಂದ ಅವರು ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ನೌಕರಿಯನ್ನು ಹುಟುಕಿಕೊಂಡರು. ಅವರು ಕೆಲಸದಲ್ಲಿ ಮಗ್ನರಾಗಿದ್ದಾಗಲೂ ಅವರ ಕನಸುಗಳನ್ನು ಎಂದಿಗೂ ಮರೆಯಲಿಲ್ಲ.

ಮಹಾಮಾರಿ ಅಪ್ಪಳಿಸಿದಾಗ ಪೀಯೂಷ್‌ ಕೆಲಸ ಕಳೆದುಕೊಂಡು ಮನೆಗೆ ಹಿಂದಿರುಗಿದರು. “ಲಾಕ್‌ಡೌನ್‌ ಸಮಯದಲ್ಲಿ ನಾನು ಏನನ್ನೂ ಸಂಪಾದಿಸುತ್ತಿರಲಿಲ್ಲ. ಆದ್ದರಿಂದ ನಾನು ಏನೆಲ್ಲ ಮಾಡಬಹುದು ಎಂದು ಯೋಚಿಸಲು ತೊಡಗಿದೆ. ನಾನು ಜೀವನೋಪಾಯಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಒತ್ತಡವನ್ನೂ, ನಡುಕವನ್ನೂ ಅನುಭವಿಸಿದೆ”. ಈ ಸಂಗತಿಗಳು ಅವರಿಗೆ ಒಂದು ಹೊಸ ದೃಷ್ಟಿಕೋನವನ್ನು ನೀಡಿದವು ಮತ್ತು ಬೇಗನೆ ಅವರ ವ್ಯಾಪಾರಿ ವಿಚಾರಗಳು ಕಾರ್ಯರಪಕ್ಕೆ ಬರಲು ತೊಡಗಿದವು.


ಅವರ ಕತೆಯನ್ನು ನೋಡಿ : ಯಶಸ್ಸಿಗೆ ಬದ್ಧನಾಗಿರುವುದು

YouTube player

ಉದ್ಯಮಿಯಾಗಬೇಕೆಂಬ ಅವರ ಕನಸಿಗೆ ಬದ್ಧರಾಗಿದ್ದು ಪೀಯೂಷ್‌ ಅವಕಾಶವನ್ನು ಅರಸುತ್ತ ಹೊರಟರು. ಈ ಸಮಯದಲ್ಲೇ ಅವರಿಗೆ ʼಶಂಖ್‌ ಸ್ಟೋರ್‌ʼ ಆರಂಭಿಸುವ ವಿಚಾರ ಹೊಳೆಯಿತು. ಅವರು ಒಂದು ತೀರ್ಥಯಾತ್ರಾ ಸ್ಥಳವೆಂದು ಪ್ರಸಿದ್ಧವಾಗಿರುವ ಒಂದು ಪಾರಂಪರಿಕ ನಗರದಲ್ಲಿ ವಾಸಿಸುತ್ತಿದ್ದರು ಮತ್ತು ಅಲ್ಲಿ ಕೆಲವು ಪದಾರ್ಥಗಳಿಗೆ ಸಿದ್ಧವಾದ ಮಾರುಕಟ್ಟೆಯಿತ್ತು.

“ನಾನು ದೇವಸ್ಥಾನಕ್ಕೆ ಹೋದಾಗ, ಜನರು ಊದುಬತ್ತಿ ಕಡ್ಡಿಗಳನ್ನು ಖರೀದಿಸುವುದನ್ನು ಗಮನಿಸಿದೆ. ಯಾತ್ರಾರ್ಥಿಗಳು ಬರುವ ಅನೇಕ ದೇವಸ್ಥಾನಗಳಿವೆ ಮತ್ತು ಯಾತ್ರಾರ್ಥಿಗಳಿರುವವರೆಗೆ ಈ ಪದಾರ್ಥಗಳು ಚೆನ್ನಾಗಿ ಬಿಕರಿಯಾಗುತ್ತವೆ ಎಂದು ನಾನು ನಂಬಿದೆ” ಎಂದು ಅವರು ಹೇಳುತ್ತಾರೆ.

ಪೀಯೂಷ್‌ ಸರಿಯಾಗಿ ಯೋಚಿಸಿದ್ದರು ಮತ್ತು ಅವರು ಒಬ್ಬ ಉದ್ಯಮಿಯಾಗಬೇಕೆಂಬ ಅವರ ಛಲ ಅವರು ಒಂದು ವ್ಯಾಪಾರವನ್ನು ಮೊದಲಿನಿಂದಲೂ ಆರಂಭಿಸಬೇಕಾದಾಗ ಎದುರಿಸುವ ದುಸ್ತರವಾದ ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರಿಯಾಗಿತ್ತು. ತಮ್ಮ ಪೋಷಕರ ಸಹಾಯದಿಂದ ಅವರು ಸ್ಥಳೀಯವಾಗಿ ಮಾರಾಟಮಾಡಲು ಆರಂಭಿಸಿದರು. ಮೂರು ತಂಗಳಲ್ಲಿ ಅವರಿಗೆ ಯಶಸ್ಸು ಸಿಕ್ಕಿದ್ದರಿಂದ ಅವರು ಅಕ್ಟೋಬರ್‌ ೨೦೨೦ರಲ್ಲಿ ತಮ್ಮ ಬ್ರ್ಯಾಂಡನ್ನು ಆನ್ಲೈನ್‌ಗೆ ತೆಗೆದುಕೊಂಡು ಹೋದರು. ಇದರಲ್ಲಿ ಅವರಿಗೆ ಫ್ಲಿಪ್ಕಾರ್ಟ್ ತಮಗೆ ಪಾಲುದಾರನಾಗಿತ್ತು.

“ಫ್ಲಿಪ್ಕಾರ್ಟ್‌ ವೇದಿಕೆಗೆ ನಾನು ಸೇರಿದ ನಂತರ ನನಗೆ ದೇಶದ ಎಲ್ಲ ಮೂಲೆಗಳಿಂದ ಬೇಡಿಕೆಗಳು ಬರಲು ಶುರುವಾದವು. ನಾನು ಹಿಂದೆ ಒಂದು ತಿಂಗಳಿನಲ್ಲಿ ಗಳಿಸುತ್ತಿದ್ದದ್ದನ್ನು ಒಂದು ವಾರದಲ್ಲಿ ಗಳಿಸಲು ಶುರುಮಾಡಿದೆ” ಎಂದು ಪೀಯೂಷ್‌ ಹೇಳುತ್ತಾರೆ. ಅವರು ಕಂಡ ಬೆಳವಣಿಗೆ ಇಂದಿಗೂ ಅವರ ಪ್ರಗತಿಯನ್ನು ಮುನ್ನಡೆಸುತ್ತಿದೆ. ಅವರು ಸಕ್ರಿಯವಾಗಿ ತಮ್ಮ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ, ಈ ಯುವಕ ಉದ್ಯಮಿಯು ತಮ್ಮ ಮನೆಯಲ್ಲಿ ಒಂದು ಚಿಕ್ಕ ವ್ಯಾಪಾರ ಶುರುಮಾಡಿದ್ದು ಈಗ ಅವರದೇ ಸ್ವಂತ ತಯಾರಿಕಾ ಘಟಕವನ್ನೂ ಹೊಂದಿದ್ದಾರೆ.

ಇಲ್ಲಿಯವರೆಗೆ ತಾವು ಸಾಧಿಸಿರುವುದರ ಬಗ್ಗೆ ಹೆಮ್ಮೆಪಡುವ ಪೀಯೂಷ್‌ ನಿಧಾನಿಸುವ ಯಾವ ಉದ್ದೇಶವನ್ನೂ ಹೊಂದಿಲ್ಲ. “ನಾನು ಈ ವ್ಯಾಪಾರ ತಿಂಗಳಿಗೆ ಒಂದು ಕೋಟಿ ರೂಪಾಯಿಗಳನ್ನು ಸಂಪಾದಿಸುವಂತೆ ಮಾಡಬೇಕೆಂದಿದ್ದೇನೆ, ಮತ್ತು ನನ್ನ ಉತ್ಪನ್ನಗಳು ದೇಶದಾದ್ಯಂತ ಮನೆಗಳಲ್ಲಿ ನಾನು ನೋಡಬೇಕೆಂದಿದ್ದೇನೆ” ಎಂದು ಹೇಳುತ್ತಾರೆ.

ಇನ್ನೂ ಹೆಚ್ಚು #ಸ್ವಯಂನಿರ್ಮಿತ ಉದ್ಯಮಿಗಳ ಯಶೋಗಾಥೆಗಳನ್ನು ಓದಲು ಇಲ್ಲಿ ಒತ್ತಿhere

Enjoy shopping on Flipkart