ಅಸ್ಸಾಮ್‌ ನ ಒಂದು ಹಳ್ಳಿಯಲ್ಲಿ ಫ್ಲಿಪ್ಕಾರ್ಟ್‌ನ ಗಿರಾಕಿಯೊಬ್ಬರು ಈ-ಕಾಮರ್ಸ್‌ ಮೂಲಕ ಬೇಕಾದದ್ದು ಎಟುಕುವುದು, ಅನುಕೂಲ ಮತ್ತು ಆಯ್ಕೆಗಳನ್ನು ಕಂಡುಕೊಂಡಿದ್ದಾರೆ

Read this article in हिन्दी | English | বাংলা | தமிழ் | ગુજરાતી | मराठी | తెలుగు

ನಬಜ್ಯೋತಿ ಲಹ್ಕಾರ್‌ ಅವರು ಅಸ್ಸಾಮಿನ ಗುವಹಾಟಿಯಲ್ಲಿ ಇಂಜಿನಿಯರಿಂಗ್‌ ಪದವಿಗೆ ಓದುತ್ತಿದ್ದಾಗ ಅವರಿಗೆ ಭಾರತದಲ್ಲಿ ತಂತ್ರಜ್ಞಾನವು ಸಾಧ್ಯವಾಗಿಸಿದ ಸಂಭ್ರಮದ ಪ್ರಪಂಚ ತೆರೆದುಕೊಂಡಿತು. ಇದೇ ಸಮಯದಲ್ಲಿ ಅವರು ಮೊದಲ ಬಾರಿಗೆ ಫ್ಲಿಪ್ಕಾರ್ಟ್‌ನ ಆಪ್‌ ಅನ್ನು ಬಳಸಲು ಶುರುಮಾಡಿದರು. ಆಗಿನಿಂದ ಅವರು ನಿಷ್ಠೆಯ ಗಿರಾಕಿಯಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಸಣ್ಣ ಹಳ್ಳಿ ಅಸ್ಸಾಮಿನ ತುಲಸಿಬಾರಿಗೆ ಫ್ಲಿಪ್ಕಾರ್ಟ್‌ ದಿನಸಿ ಪದಾರ್ಥಗಳನ್ನು ತಲುಪಿಸುವ ಬಗ್ಗೆ ತಿಳಿದುಕೊಂಡಾಗ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ಅವರ ಪ್ರಕಾರ ಫ್ಲಿಪ್ಕಾರ್ಟ್‌ ತಮ್ಮ ಹಳ್ಳಿಯ ಜನರಿಗೆ ಅವರ ದೈನಂದಿನ ಅಗತ್ಯಗಳು ಕುರಿತಂತೆ ಬೇಕಾದದ್ದು ಎಟುಕುವುದು ಮತ್ತು ಆಯ್ಕೆಗಳು ಹೆಚ್ಚಾಗಿವೆ ಎನ್ನುತ್ತಾರೆ. ನಬಜ್ಯೋತಿಯವರು ಫ್ಲಿಪ್ಕಾರ್ಟ್‌ನ ಸೇವೆಗಳ ಮೂಲಕ ಕಂಡಕೊಂಡ, ಅನುಭವಿಸಿದ ಮತ್ತು ಹಂಚಿಕೊಂಡ ಕತೆ ಇಲ್ಲಿದೆ.

Assam

I೨೦೧೩ರಲ್ಲಿ, ನಬಜ್ಯೋತಿ ಲಹ್ಕರ್‌ ತಮ್ಮ ಮೊದಲನೆಯ ಕೊಳ್ಳುವಿಕೆಯನ್ನು ಫ್ಲಿಪ್ಕಾರ್ಟ್‌ನ ಮೂಲಕ ಮಾಡಿದರು. ಆಗ, ಅವರು ಅಸ್ಸಾಮ್‌ನ ಗುವಹಾಟಿಯಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದರು. ಗುವಹಾಟಿಯಲ್ಲಿ ಸಿಗುವ ಅವಕಾಶಗಳು ಅವರ ಸ್ವಂತ ಊರಾದ ತುಲ್ಸಿಬಾರಿಗಿಂತ ಸಾಕಷ್ಟು ಬೇರೆಯೆಂದು ನಬಜ್ಯೋತಿ ನೆನಪಿಸಿಕೊಳ್ಳುತ್ತಾರೆ. ಅಸ್ಸಾಮ್‌ನ ಕಾಮ್‌ರೂಪ್‌ ಜಿಲ್ಲೆಯ ಒಂದು ಸಣ್ಣ, ಹಳ್ಳಿ ತುಲಸಿಬಾರಿ ನಗರದಲ್ಲಿ ಎಲ್ಲೆಡೆ ಕಂಡುಬರುವ ಡಿಜಿಟಲ್‌ ಕ್ರಾಂತಿಯನ್ನೂ ಇನ್ನೂ ಅಳವಡಿಸಿಕೊಳ್ಳಬೇಕಾಗಿದೆ. ಅದು, ೨೦೧೬ರವರೆಗೆ ಮಾತ್ರ.

“ನಾನು ಪದವಿ ಪಡೆದುಕೊಂಡ ನಂತರ ನನ್ನ ಹಳ್ಳಿಗೆ ಬರಳಿ ಬಂದೆ” ಎಂದು ನಬಜ್ಯೋತಿ ಹೇಳುತ್ತಾರೆ. “ಇದೆ ಸಮಯದಲ್ಲಿ, ಫ್ಲಿಪ್ಕಾಟ್‌ ತನ್ನ ಸೇವೆಗಳನ್ನು ತುಲ್ಸಿಬಾರಿಗೂ ವಿಸ್ತರಿಸಿದೆ ಎಂದು ತಿಳಿದುಕೊಂಡೆ. ನಾನು ಬಹಳ ಸಂತೋಷಪಟ್ಟೆ”.

“ಆಗಿನಿಂದ ನಾನು ಮನೆಯಲ್ಲಿ ಎಲ್ಲರಿಗೂ ಉತ್ಪನ್ನಗಳನ್ನು ಫ್ಲಿಪ್ಕಾರ್ಟ್‌ನಲ್ಲಿ ಖರೀದಿಸುತ್ತಿದ್ದೇನೆ” ಎಂದೂ ತಿಳಿಸುತ್ತಾರೆ.

ಜನವರಿ ೨೦೨೨ರಲ್ಲಿ ನಬಜ್ಯೋತಿ ತಮ್ಮ ಜೀವನವನ್ನೂ ಇನ್ನೂ ಸುಗಮಗೊಳಿಸುವ ಒಂದು ವಿಷಯವನ್ನು ತಿಳಿದುಕೊಂಡರು. “ಈಚೆಗೆ, ಫ್ಲಿಪ್ಕಾರ್ಟ್‌ನ ದಿನಸಿ ಪದಾರ್ಥಗಳು ನಮ್ಮ ಹಳ್ಳಿಯಲ್ಲಿ ಸಿಗತ್ತವೆ ಎಂಬುದನ್ನು ಗಮನಿಸಿದೆ. ಇದನ್ನು ಒಮ್ಮೆ ಪರೀಕ್ಷಿಸಿ ನೋಡಿದೆ ಮತ್ತು ಹಳ್ಳಿಯಲ್ಲಿ ಈ ಸೇವೆ ನಮ್ಮ ಬದುಕಿಗೆ ಮೌಲ್ಯವನ್ನು ಸೇರಿಸಿದೆ ಎಂದು ನಿಜವಾಗಿ ಭಾವುಕನಾದೆ” ಎಂದು ವಿವರಿಸುತ್ತಾರೆ. “ನಾನು ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವುದರಿಂದ ನನಗೆ ಸಮಯ ಬಹಳ ಮೌಲ್ಯಯುತವಾದದ್ದು. ಫ್ಲಿಪ್ಕಾರ್ಟ್‌ ಗ್ರಾಸರಿ ಇರುವುದರಿಂದ ನಾನು ಕೇವಲ ೩-೫ ನಿಮಿಷಗಳನ್ನು ಬೇಕಾದ ಪದಾರ್ಥ ತರಿಸಿಕೊಳ್ಳಲು ಬೇಡಿಕೆ ಸಲ್ಲಿಸಿದರೆ ಮತ್ತೆಲ್ಲವನ್ನೂ ಸಂಪೂರ್ಣವಾಗಿ ನೋಡಿಕೊಳ್ಳಲಾಗುತ್ತದೆ”.

Assam

ಭಾರತದಾದ್ಯಂತ ಅನೇಕ ಹಳ್ಳಿಗಳಲ್ಲಿ, ಅಂದರೆ ನಬಜ್ಯೋತಿಯವರ ತುಲ್ಸಿಬಾರಿಯಂತಹ ಹಳ್ಳಿಗಳಲ್ಲಿ, ಫ್ಲಿಪ್ಕಾರ್ಟ್‌ ಗ್ರಾಸರಿ ಎಂಬ ಈ-ಕಾಮರ್ಸ್‌ ವೇದಿಕೆಯ ಸಂಪರ್ಕದಿಂದ ಕೇವಲ ಬೇಕಾದದ್ದು ಎಟುಕುವುದು ಮತ್ತು ಅನುಕೂಲವಲ್ಲದೆ ಗ್ರಾಹಕರಿಗೆ ಹೆಚ್ಚಿನ ವೈವಿಧ್ಯದ ಆಯ್ಕೆಗಳು ದೊರೆಯುತ್ತವೆ. ಅವರು ಹೇಳುತ್ತಾರೆ, “ಸಾಮಾನ್ಯವಾಗಿ, ಒಂದು ಉತ್ಪನ್ನಕ್ಕೆ ನಮಗೆ ಬರೀ ೨ ಅಥವ ೩ ಆಯ್ಕೆಗಳಿರುತ್ತವೆ, ಮತ್ತು ನಾವು ಅವು ನಮಗೆ ಇಷ್ಟವಿಲ್ಲದಿದ್ದರೂ ಅವುಗಳಿಂದಲೇ ಸಂಭಾಳಿಸಬೇಕಾಗುತ್ತದೆ”.

Assam

ಪ್ರಸ್ತುತ ಫ್ಲಿಪ್ಕಾರ್ಟ್‌ ಗ್ರಾಸರಿ ಭಾರತದಾದ್ಯಂತ ೧೮೦೦ರಕ್ಕೂ ಹೆಚ್ಚು ನಗರಗಳು ಮತ್ತು ೧೦,೦೦೦ಕ್ಕೂ ಅಂಚೆ ಪಿನ್‌ಕೋಡ್‌ ಇರುವ ಜಾಗಗಳಿಗೆ ತನ್ನ ಸೇವೆಯನ್ನು ಒದಗಿಸುತ್ತದೆ. ಗುವಹಾಟಿಯಲ್ಲಿರುವ ಇತ್ತೀಚಿನ ಕೇಂದ್ರವು ೮೦೦ರಕ್ಕೂ ಹೆಚ್ಚು ಅಂಚೆ ಪಿನ್‌ಕೋಡ್‌ ಇರುವ ಸ್ಥಳಗಳಿಗೆ ತನ್ನ ಸೇವೆ ಒದಗಿಸುತ್ತದೆ. ಅವುಗಳಲ್ಲಿ ಗುವಹಾಟಿಯ ಪೂರ್ತಿಯಲ್ಲದೆ ಅಗರ್ತಲ, ಅಯ್‌ಜ಼ಾವಲ್‌, ಡಾರ್ಜೀಲಿಂಗ್‌, ದಿಬ್ರೂಘರ್‌, ಇಂಫಾಲ್‌, ಕೊಹಿಮ ಮತ್ತು ಶಿಲ್ಲಾಂಗ್‌ ನಂತಹ ನಗರಗಳು ಮತ್ತು ಪಟ್ಟಣಗಳೂ ಸೇರಿವೆ. ಉತ್ತಮ ಗುಣಮಟ್ಟದ ಆಹಾರ ಮತ್ತು ಗೃಹೋಪಯೋಗಿ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದಂತೆ, ವಿಶೇಷವಾಗಿ ಮಹಾಮಾರಿಯ ಕಾಲದಿಂದ ತಡೆಯಿಲ್ಲದೆ ಮತ್ತು ಎಟುಕುವ ಬೆಲೆಗಳಲ್ಲಿ ಪ್ರತಿಯೊಬ್ಬ ಗಿರಾಕಿಗೂ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಫ್ಲಿಪ್ಕಾರ್ಟ್‌ ತನ್ನ ಸೇವೆಗಳನ್ನು ಹೆಚ್ಚಿಸುತ್ತಿದೆ

“ನಮಗೆ ಫ್ಲಿಪ್ಕಾರ್ಟ್‌ ಸೇವೆಗಳು ಎಂದರೆ ಉನ್ನತ ಗುಣಮಟ್ಟ ಮತ್ತು ನಂಬಿಕೆಗೆ ಅರ್ಹವಾದ ಉತ್ಪನ್ನಗಳು ಸಿಗುವುದು ಎಂದರ್ಥ. ಒಳ್ಳೆಯದೆಲ್ಲವನ್ನೂ ಮೆಚ್ಚಬೇಕೆಂದು ನಾನು ನಂಬಿದ್ದೇನೆ” ಎನ್ನುತ್ತಾರೆ ನಬಜ್ಯೋತಿ, ಅವರು ಪದಾರ್ಥ ದೊರೆಯುವುದರ ಬಗ್ಗೆ ಟ್ವೀಟ್‌ ಮಾಡಿದರು ತುಲ್ಸಿಬಾರಿಯಲ್ಲಿ ಸಿಗುವ ಸೇವೆಯ ಬಗ್ಗೆ ಮತ್ತು ಅದು ಅವರಿಗೆ ಮತ್ತು ಅವರ ಪರಿವಾರಕ್ಕೆ ತರುವ ಸಂತೋಷದ ಬಗ್ಗೆ ಹೇಳಿದರು.

“ನಾನು ನನ್ನ ಹಳ್ಳಿಯಲ್ಲಿರುವ ಕೆಲವು ಸ್ನೇಹಿತರನ್ನು ಮತ್ತು ಪರಿಚಯದವರನ್ನು ಫ್ಲಿಪ್ಕಾರ್ಟ್‌ಗೆ ಸೇರಿಸಿದ್ದೇನೆ. ಅವರಲ್ಲಿ ಕೆಲವರು ಈ ಸೇವೆಯ ಬಗ್ಗೆ ಟ್ವೀಟ್‌ ಮಾಡಿದರು” ಎಂದು ತಿಳಿಸುತ್ತಾರೆ. ಇದರ ಪ್ರಯೋಜನಗಳನ್ನು ಅನುಭವಿಸಿದ ನಂತರ ನಬಜ್ಯೋತಿಯವರ ತಾಯಿಯವರು ಸಂತೋಷಗೊಂಡಿರುವ ಗಿರಾಕಿಗಳ ಗುಂಪನ್ನು ಸೇರಿಕೊಂಡಿದ್ದಾರೆ; ಅವರು ತಮ್ಮ ಮಗನಿಗೆ ತಮ್ಮ ದೈನಂದಿನ ಅಗತ್ಯಗಳಿಗೆ ಫ್ಲಿಪ್ಕಾರ್ಟ್‌ ಗ್ರಾಸರಿಯನ್ನು ಆಯ್ಕೆಮಾಡಿಕೊಳ್ಳು ಹೇಳುತ್ತಾರೆ.


ಇನ್ನೂ ಓದಿ – ಅಸ್ಸಾಮ್‌ ನಲ್ಲಿ ಓರ್ವ ಸಂತೃಪ್ತ ಗಿರಾಕಿ ತಮ್ಮ ಕುಟುಂಬವು ಉತ್ತಮವಾದ ಉತ್ಪನ್ನಗಳನ್ನು ಪಡೆದುಕೊಳ್ಳಲು ಫ್ಲಿಪ್ಕಾರ್ಟ್‌ ಸಹಾಯಮಾಡುತ್ತದೆಂದು ಹೇಳುತ್ತಾರೆ

Enjoy shopping on Flipkart