ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ವಚ್ಛಗೊಳಿಸುವುದರಿಂದ ಹಿಡಿದು ತನ್ನ ಉದ್ಯೋಗಿಗಳು ಕೆಲಸಕ್ಕೆ ಹೋಗಲು ಹೆಚ್ಚು ದೂರ ಪ್ರಯಾಣಿಸಬೇಕಾಗಿಲ್ಲವೆಂದು ಖಚಿತಪಡಿಸಿಕೊಳ್ಳುವವರೆಗೆ, ಫ್ಲಿಪ್‌ಕಾರ್ಟ್ ಮಾರಾಟಗಾರರಾದ ಸಂಜೀಬ್ ಪ್ರಸಾದ್ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಇಲ್ಲಿ, ಅವರು ತಮ್ಮ ಕಂಪನಿಯು ಕೋವಿಡ್-19 ಪರಿಸ್ಥಿತಿಗೆ ಹೇಗೆ ಹೊಂದಿಕೊಳ್ಳುತ್ತಿದೆ ಎಂಬುದರ ಕುರಿತು ಮಾತನಾಡುತ್ತಾರೆ ಮತ್ತು ಅವರಂತಹ ಸಣ್ಣ ವ್ಯಾಪಾರವನ್ನು ಬೆಂಬಲಿಸಿದ್ದಕ್ಕಾಗಿ ಗ್ರಾಹಕರಿಗೆ ಧನ್ಯವಾದ ಹೇಳುತ್ತಾರೆ. ಅವರ ಕಥೆಯನ್ನು ಓದಿ.
ನನ್ನ ಹೆಸರು ಸಂಜೀಬ್ ಪ್ರಸಾದ್ ಮತ್ತು ನಾನು ಅಗತ್ಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡುತ್ತೇನೆ. ಕೋವಿಡ್-19ನ ಹರಡುವಿಕೆಯನ್ನು ಎದುರಿಸಲು ಲಾಕ್‌ಡೌನ್ ಮತ್ತು ಅದರ ಪರಿಣಾಮವಾಗಿ ಹೇರಲಾದ ನಿರ್ಬಂಧಗಳನ್ನು ಘೋಷಿಸಿದಾಗ, ನಮ್ಮ ವ್ಯಾಪಾರವನ್ನು ಮುಂದುವರೆಸಲು ನಾವು ಇ-ಕಾಮರ್ಸ್ ಅನ್ನು ಹೇಗೆ ಬಳಸಿಕೊಳ್ಳಬಹುದೆಂದು ನಾವು ಅರ್ಥಮಾಡಿಕೊಳ್ಳಬಯಸಿದ್ದೆವು. ಫ್ಲಿಪ್‌ಕಾರ್ಟ್ ನಮಗೆ ಸಕಾಲಿಕ ಬೆಂಬಲ ಸಮಯೋಚಿತ ಸಂವಹನ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ನೀಡಿತು, ಮತ್ತು ಕಾರ್ಯಾಚರಣೆಯನ್ನು ಪುನರಾರಂಭಿಸಲು ಅವರು ಉತ್ಸುಕರಾಗಿದ್ದರು, ಅದನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ.
ನಾವು ಈಗಾಗಲೇ ಸ್ಯಾನಿಟೈಜರ್‌ಗಳು, ಫೇಸ್ ವಾಶ್‌ಗಳು, ಸಾಬೂನುಗಳು ಮತ್ತು ಹೈಜೀನ್ ಕಿಟ್‌ಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರಿಂದ, ಫ್ಲಿಪ್‌ಕಾರ್ಟ್‌ನಲ್ಲಿ ನಮ್ಮ ಉತ್ಪನ್ನಗಳನ್ನು ಲಿಸ್ಟಿಂಗ್ ಮಾಡುವುದನ್ನು ಪುನರಾರಂಭಿಸುವಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ.
ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ನೌಕರರು ಮತ್ತು ವ್ಯಾಪಾರ ಕಾರ್ಯಾಚರಣೆಗಳ ವಿಷಯದಲ್ಲಿ ನಾವು ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ಕಚೇರಿ ಸಮಯದ ನಂತರ, ನಾವು ನಮ್ಮನ್ನು ಸ್ವಚ್ಛಗೊಳಿಸಿಕೊಳ್ಳುತ್ತೇವೆ ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತೇವೆ. ಪ್ರಸ್ತುತ, ನಾವು 33% ಉದ್ಯೋಗಿ ಬಲದೊಂದಿಗೆ ಕೆಲಸ ಮಾಡುತ್ತಿದ್ದೇವೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮೊದಲು, ನಾವು 20 ಉದ್ಯೋಗಿಗಳನ್ನು ಹೊಂದಿದ್ದೆವಾದರೂ ಈಗ ನಾಲ್ಕರಿಂದ ಐದು ಉದ್ಯೋಗಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ.
ಅವರು ನಮ್ಮ ಪ್ರದೇಶಕ್ಕೆ ಹತ್ತಿರದಲ್ಲೇ ವಾಸಿಸುತ್ತಿರುವುದರಿಂದ, ಆದ್ದರಿಂದ ಅವರು ಕೆಲಸ ಮಾಡಲು ಹೆಚ್ಚು ದೂರ ಪ್ರಯಾಣಿಸಬೇಕಾಗಿಲ್ಲವೆಂದು ನಾವು ಖಾತ್ರಿಪಡಿಸುತ್ತೇವೆ. ನಮ್ಮ ಉದ್ಯೋಗಿಗಳು ಕಚೇರಿಯನ್ನು ತಲುಪಿದಾಗ ಅವರು ಒಂದು ಲಾಗ್‌ಬುಕ್‌ಗೆ ಸಹಿ ಮಾಡುತ್ತಾರೆ. ನಂತರ ನಾವು ನೌಕರರ ಉಷ್ಣತೆಯನ್ನು ತೆಗೆದುಕೊಂಡು ಅವರ ಕೈ ಕಾಲುಗಳಿಗೆ ಸ್ಯಾನಿಟೈಜರ್ ಅನ್ನು ಒದಗಿಸುತ್ತೇವೆ. ನಾವು ಸ್ಯಾನಿಟೈಜರ್‌ಗಳನ್ನು ಕಾರ್ಯಸ್ಥಳದಲ್ಲಿ ಮತ್ತು ಬಾಗಿಲಿನ ಬಳಿ ಇಡುತ್ತೇವೆ. ಪ್ರತಿ 2 ಗಂಟೆಗಳಿಗೊಮ್ಮೆ, ಪ್ರತಿಯೊಬ್ಬರಿಗೂ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವಂತೆ ನಾನು ಸೂಚಿಸುತ್ತೇನೆ ಮತ್ತು ನಾನೂ ಅದನ್ನೇ ಮಾಡುತ್ತೇನೆ. ನಾವು ಎರಡು ಜೋಡಿ ಕೈಗವಸುಗಳನ್ನು ಸಹ ಒದಗಿಸುತ್ತಿದ್ದು ಅದನ್ನು ಕೆಲಸದ ಸಮಯದ ನಂತರ ತೆಗೆದುಹಾಕಲಾಗುತ್ತದೆ. ನಾವು ಪ್ರತಿದಿನ ಈ ದಿನಚರಿಯನ್ನು ಪಾಲಿಸುತ್ತೇವೆ.
ಫ್ಲಿಪ್‌ಕಾರ್ಟ್‌ನೊಂದಿಗೆ ಸಂಬಂಧ ಹೊಂದಿರುವುದು, ಹಾಗೂ ರಾಷ್ಟ್ರಾದ್ಯಾಂತ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಸಾಧ್ಯವಾದಾಗಲೆಲ್ಲಾ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಂತೆ ನಾವು ನಮ್ಮ ಭಾರತೀಯರ ಜೊತೆಗಾರರನ್ನು ಒತ್ತಾಯಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಮತ್ತು ದಿನಸಿ ವಸ್ತುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳು ತಮಗೆ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ. ಇದು ನಮ್ಮಂತಹ ಸಣ್ಣ ಉದ್ಯಮಗಳ ಉಳಿವನ್ನೂ ಖಚಿತಪಡಿಸುತ್ತದೆ. ನಮ್ಮೊಂದಿಗೆ ಶಾಪಿಂಗ್ ಮಾಡಿದ್ದಕ್ಕೆ ನಮ್ಮೆಲ್ಲ ಗ್ರಾಹಕರಿಗೂ ಅನಂತ ‘ಧನ್ಯವಾದಗಳು!’
ಜಿಷ್ಣು ಮುರಳಿ ಅವರಿಗೆ ಹೇಳಿದಂತೆ ಪಲ್ಲವಿ ಸುಧಾಕರ್ ಅವರಿಂದ ಹೆಚ್ಚುವರಿ . ಕೊಡುಗೆಗಳೊಂದಿಗೆ