ಕೋವಿಡ್‌-19 ಲಾಕ್‌ಡೌನ್‌ನಲ್ಲಿ, ಈ ಫ್ಲಿಪ್‌ಕಾರ್ಟ್‌ ಮಾರಾಟಗಾರರು ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದ್ದಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ

Read this article in বাংলা | English | हिन्दी | தமிழ் | ગુજરાતી | मराठी

ಕೋವಿಡ್‌-19 ಸಾಂಕ್ರಾಮಿಕದಲ್ಲಿ, ಭಾರತದಾದ್ಯಂತ ಇರುವ ಜನರು ತಮ್ಮ ದೈನಂದಿನ ಅಗತ್ಯಗಳು ಸುರಕ್ಷಿತ ಮತ್ತು ಅನುಕೂಲಕರವಾಗಿ ಸಿಗಲು ಇ-ಕಾಮರ್‌್ನನತ್ತ ಮುಖ ಮಾಡಿದ್ದಾರೆ. ನಮ್ಮ ವಿಶ್‌ಮಾಸ್ಟರ್‌‌ಗಳು ಪ್ರತಿದಿನ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾಗ, ನಮ್ಮ ಮಾರಾಟಗಾರರು ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಫ್ಲಿಪ್‌ಕಾರ್ಟ್‌ ಮಾರಾಟಗಾರರಾದ ಮೋಹಿತ್ ಅರೋರಾ ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಫೇಸ್ ಮಾಸ್ಕ್‌ ಗಳನ್ನು ಮಾರಾಟ ಮಾಡುತ್ತಾರೆ. ಅವರು ಗ್ರಾಹಕರು ಮತ್ತು ಉದ್ಯೋಗಿಗಳ ಸುರಕ್ಷತೆಯನ್ನು ಖಾತರಿಪಡಿಸುತ್ತ ತನ್ನ ವ್ಯಾಪಾರವನ್ನು ಹೇಗೆ ನಡೆಸುತ್ತಿದ್ದಾರೆ, ಮತ್ತು ಅದೇ ಸಮಯದಲ್ಲಿ ಭಾರತಕ್ಕಾಗಿ ತನ್ನ ಚಿಕ್ಕ ಕೊಡುಗೆ ನೀಡುತ್ತಿದ್ದಾರೆಂದು ಓದಿ

selling essentials

ನ್ನ ಹೆಸರು ಮೋಹಿತ್ ಅರೋರಾ. ನಾನು ಹರಿಯಾಣದ ಹಿಸಾರ್ ಮೂಲದವನು. ನಾನು ಅಗತ್ಯ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ನಾಲ್ಕು ವರ್ಷಗಳ ಹಿಂದೆ ಮಾರಲು ಪ್ರಾರಂಭಿಸಿದೆ ಮತ್ತು ನನ್ನ ಕಂಪನಿಯಾದ ಶ್ರೀ ರಾಧೆ ಟ್ರೇಡಿಂಗ್ ಕಂಪನಿ ಅಂದಿನಿಂದ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ನಾನು ಅಗತ್ಯ ಉತ್ಪನ್ನಗಳನ್ನು ಮಾರಾಟ ಮಾಡುವ ಭೌತಿಕ ರೀಟೇಲ್ ಸ್ಟೋರ್ ಅನ್ನೂ ಸಹ ಹೊಂದಿದ್ದೇನೆ.

ಕೋವಿಡ್‌-19 ಸಾಂಕ್ರಾಮಿಕ ರೋಗ ಬಂದಾಗ, ಅದು ನಮಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು. ಒಂದು ಸಾಧಾರಣ ದಿನದಲ್ಲಿ, ನನ್ನ 15 ಸಿಬ್ಬಂದಿ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುತ್ತಾರಾದರೂ ಈಗಿನ ಪರಿಸ್ಥಿತಿಯಲ್ಲಿ, ನಾನು ಆ ಸಂಖ್ಯೆಯನ್ನು ಮೂರಕ್ಕೆ ಇಳಿಸಬೇಕಾಯಿತು. ಇದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೂ ನಮಗೆ ಸಹಾಯ ಮಾಡುತ್ತದೆ. ನಾವು ಅದೃಷ್ಟವಂತರು, ಏಕೆಂದರೆ ರೆಡ್‌ಕ್ರಾಸ್ ತಂಡವು ನಮ್ಮ ಸಮಾಜದ ಪ್ರದೇಶವನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಬರುತ್ತದೆ.

ನಾವು ನಮ್ಮನ್ನು ಮತ್ತು ನಮ್ಮ ಉದ್ಯೋಗಿಗಳನ್ನು ರಕ್ಷಿಸುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ – ನಾವು ನಮ್ಮನ್ನು ಮತ್ತು ನಮ್ಮ ಕಾರ್ಯಕ್ಷೇತ್ರವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತೇವೆ. ನಾವು ಮುಖವಾಡಗಳು ಮತ್ತು ಕೈಗವಸುಗಳಂತಹ ರಕ್ಷಣಾತ್ಮಕ ಕಿಟ್‌ಗಳನ್ನು ಸಹ ಬಳಸುತ್ತೇವೆ ಮತ್ತು ನಮ್ಮ ಗೋಡೌನ್‌ಗೆ ಬರುವ ಸರಕುಗಳನ್ನೂ ಸಹ ಸ್ವಚ್ಛಗೊಳಿಸುತ್ತೇವೆ.

ಈ ಕಷ್ಟದ ಸಮಯದಲ್ಲಿ ಫ್ಲಿಪ್‌ಕಾರ್ಟ್‌ ನಮ್ಮೊಂದಿಗೆ ಮುಕ್ತವಾಗಿ ಸಂವಹನ ನಡೆಸುತ್ತಿದೆ. ನಾವು ಪ್ರತಿದಿನದ ಅಪ್‌ಡೇಟ್‌ಗಳು ಮತ್ತು ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಪಡೆಯುತ್ತೇವೆ.

ಸಾಂಕ್ರಾಮಿಕ ರೋಗದ ಮುಂಚೆಯೇ, ನಾನು ಸ್ಯಾನಿಟೈಜರ್‌ಗಳು, ಸಾಬೂನುಗಳು ಮತ್ತು ಶ್ಯಾಂಪೂಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೆ. ಆದರೆ ಫ್ಲಿಪ್‌ಕಾರ್ಟ್‌ ನನ್ನ ಉತ್ಪನ್ನ ಲಿಸ್ಟಿಂಗ್‌ಗಳನ್ನು ವಿಸ್ತರಿಸಿ ಮಾಸ್ಕ್ ಗಳಂತಹ ಇನ್ನೂ ಕೆಲವು ಅಗತ್ಯ ವಸ್ತುಗಳನ್ನು ಸೇರಿಸಲು ಸಲಹೆ ನೀಡಿತು. ಮತ್ತು ಈ ಸಮಯದಲ್ಲಿ, ಈ ಅಗತ್ಯಗಳಿಗಾಗಿನ ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ನಾನು ಸಾಮಾನ್ಯಕ್ಕಿಂತ ಹೆಚ್ಚಿನ ಆರ್ಡರ್‌ಗಳನ್ನು ಪಡೆದಿದ್ದೇನೆ ಮತ್ತು ನನ್ನ ವ್ಯಾಪಾರವು ಬೆಳೆಯುತ್ತಿರುವುದನ್ನು ನೋಡಿದ್ದೇನೆ. ಏಪ್ರಿಲ್ 10, 2020 ರಂದು ನಾನು ನನ್ನ ಸೇವೆಗಳನ್ನು ಪುನರಾರಂಭಿಸಿದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿನ ನನ್ನ ಅಕೌಂಟ್ ಮ್ಯಾನೇಜರ್‌ ನನ್ನ ವ್ಯಾಪಾರದ ಸುಗಮ ಪರಿವರ್ತನೆ ಮತ್ತು ನಿರಂತರತೆಯನ್ನು ಖಚಿತಪಡಿಸಿದರು.

ಫ್ಲಿಪ್‌ಕಾರ್ಟ್‌ ಮಾನದಂಡಗಳು ಯಾವಾಗಲೂ ಹೆಚ್ಚಿರುವುದರಿಂದ ಮತ್ತು ಅವರ ನಿಯಮಗಳು ವ್ಯವಸ್ಥಿತವಾಗಿರುವುದರಿಂದ ನಾನು ಅದನ್ನು ನಂಬಿದ್ದೇನೆ. ಉತ್ಪನ್ನದ ಚಿತ್ರಗಳು ಮತ್ತು ವಿವರಣೆಗಳು ಸ್ಪಷ್ಟವಾಗಿವೆ ಮತ್ತು ಅವರ ಮಾರ್ಗಸೂಚಿಗಳು ಬಹಳ ಸಹಾಯಕವಾಗಿವೆ. ಮತ್ತು ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸುವ ಅವರ ದೈನಂದಿನ ಇಮೇಲ್‌ಗಳು ಮತ್ತು ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ನೀಡುವುದು ನಮ್ಮ ಕಾಳಜಿ ತೆಗೆದುಕೊಂಡ ಅನುಭವ ನೀಡುತ್ತದೆ!
ಮನೆಯಲ್ಲಿ, ನನ್ನ ಕುಟುಂಬ ಮತ್ತು ನಾನು ನಮ್ಮ ಪ್ರತಿರಕ್ಷಣೆಗೆ ಯಾವುದೇ ಧಕ್ಕೆ ಬಾರದಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ನಾವು ಯೋಗಾಭ್ಯಾಸ ಮಾಡುವ ಮೂಲಕ ನಮ್ಮ ದಿನವನ್ನು ಪ್ರಾರಂಭಿಸುತ್ತೇವೆ ಮತ್ತು ಫ್ಲಿಪ್‌ಕಾರ್ಟ್‌ ಆಯೋಜಿಸಿದ ನೃತ್ಯ ತರಗತಿಗಳಿಗೆ ಹಾಜರಾಗುತ್ತೇವೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲು ನನ್ನ ತಂದೆ ಒಂದು ಗಿಡಮೂಲಿಕೆ ಪಾನೀಯವನ್ನೂ ತಯಾರಿಸುತ್ತಾರೆ!
.
ಲಾಕ್‌ಡೌನ್ ಅನ್ನು ಮೊದಲ ಬಾರಿ ಘೋಷಿಸಿದಾಗ, ನಾವು ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಿದ್ಧವಾಗುವವರೆಗೂ ನನ್ನ ಕಂಪನಿಯೊಂದಿಗೆ ನಾನು ಮಾಡಬಹುದಾದದ್ದು ಹೆಚ್ಚೇನೂ ಇರಲಿಲ್ಲ. ಆದ್ದರಿಂದ ಆ ಸಮಯದಲ್ಲಿ, ನನ್ನ ಕುಟುಂಬ ಮತ್ತು ನಾನು ನಮ್ಮ ಪ್ರದೇಶದಲ್ಲಿ ಅಗತ್ಯವಿರುವ ಜನರಿಗೆ ಸ್ಯಾನಿಟೈಜರ್‌ಗಳು ಮತ್ತು ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದೆವು.

ಅಗತ್ಯ ವಸ್ತುಗಳನ್ನು ಮಾರಾಟ ಮಾಡುವುದು

ನನ್ನ ಸಹ ಭಾರತೀಯರಿಗೆ ನಾನೊಂದು ಪುಟ್ಟ ಸಂದೇಶ ನೀಡಬೇಕು. ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುತ್ತಿದ್ದೇವೆ. ನಿಮ್ಮ ಕಡೆಯಿಂದ, ನೀವು ಏನನ್ನೇ ಖರೀದಿಸಿದರೂ ಅದನ್ನು ಸರಿಯಾಗಿ ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಈ ಸಾಂಕ್ರಾಮಿಕದಿಂದ ನಾವು ಆರೋಗ್ಯಕರವಾಗಿ ಬಚಾವಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡೋಣ!

ಜಿಷ್ಣು ಮುರಳಿ ಅವರಿಗೆ ಹೇಳಿದಂತೆ ಪಲ್ಲವಿ ಸುಧಾಕರ್ ಅವರಿಂದ ಹೆಚ್ಚುವರಿ ಕೊಡುಗೆಗಳೊಂದಿಗೆ .

Enjoy shopping on Flipkart