#ಸ್ವಯಂ-ನಿರ್ಮಿತ – ಈ ಛಲ ಹೊಂದಿರುವ ಫ್ಲಿಪ್ಕಾರ್ಟ್‌ನ ಮಾರಾಟಗಾರರಿಗೆ ಅಂಗವೈಕಲ್ಯ ಹಿನ್ನಡೆಯಲ್ಲವೇ ಅಲ್ಲ

Read this article in हिन्दी | English | বাংলা | தமிழ் | ગુજરાતી | मराठी | తెలుగు

ಒಂದು ರಸ್ತೆ ಅಪಘಾತದಲ್ಲಿ ೩೩ ವರ್ಷದ ಕೋಮಲ್‌ ಪ್ರಸಾದ್‌ ಪಾಲ್‌ ತಮ್ಮ ಬಲಗೈಯನ್ನು ಕಳೆದುಕೊಂಡರು, ಆದರೆ ಕೊಲ್ಕತಗೆ ಸೇರಿದ ಈ ಧೈರ್ಯಶಾಲಿ, ಮೈಕ್ರೊಬಯಾಲಜಿ ಪದವಿಧರರು ಒಬ್ಬ ಫ್ಲಿಪ್ಕಾರ್ಟ್‌ನ ಮಾರಾಟಗಾರರಾಗಿ ಅವಕಾಶವನ್ನು ಅಪ್ಪಿಕೊಂಡರು.

Flipkart Sellers with Disability

ಕೋಲ್‌ ಪ್ರಸಾದ್‌ ಪಾಲ್ಅವರಿಗೆ ಒಂದು ಗಹನವಾದ ವೈಯಕ್ತಿಕ ದುರಂತ ತಮ್ಮ ಬದುಕಿನಲ್ಲಿ ನಿರ್ಣಾಯಕ ಘಟ್ಟವಾಯಿತು. ಡಿಸೆಂಬರ್‌ ೨೦೧೭ರಲ್ಲಿ ಕೋಮಲ್‌ ಕೊಲ್ಕತದ ಹತ್ತಿರವಿರುವ ಬರಸಾತ್‌ನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಒಂದು ರಸ್ತೆ ಅಪಘಾತ ಸಂಭವಿಸಿತು. ಒಂದು ಲಾರಿಗೆ ಡಿಕ್ಕಿಹೊಡೆದ ನಂತರ ಈ ಯುವಕ ಎಂಟು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದರು. ನಂತರ ಅವರನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು. ಅವರಿಗೆ ಪ್ರಜ್ಞೆ ಮರುಕಳಿಸಿದಾಗ ಅವರ ಬಲಗೈಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಲಾಗುತ್ತು ಎಂದು ತಿಳಿದು ಆಘಾತವಾಯಿತು. ಈ ಆಘಾತದಿಂದ ಗರಬಡಿಂದಂತಾಗಿ ಅವರಿಗೆ ತಮ್ಮ ದುಃಖವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯಲಿಲ್ಲ. ಮುಂದೆ ಅವರು ತಮ್ಮ ಕುಟುಂಬವನ್ನು ಹೇಗೆ ಪೋಷಿಸುತ್ತಾರೆ?

ಕೋಮಲ್‌ ಆಸ್ಪತ್ರೆಯಲ್ಲಿ ಒಂದು ತಿಂಗಳು ಕಳೆದರು. ಅವರಿಗೆ ತುಂಬ ಬೇಜಾರಾದಾಗ ಅವರ ತಂದೆಯವರಿಗೆ ಸ್ವಲ್ಪ ಕಾಗದ, ಪೆನ್ಸಿಲ್‌ಗಳು ಮತ್ತು ಒಂದು ಎರೇಸರ್‌ ಅನ್ನು ತರಲು ಹೇಳಿದರು. ಅವರಿಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದು, ಬಣ್ಣ ಹಚ್ಚುವ ಕಲೆಯಲ್ಲಿ ಆಸಕ್ತಿಯಿತ್ತು, ಮತ್ತು ಅವರು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾಗ ಅವರ ಈ ಪ್ರತಿಭೆಗಳು ಹೊರಹೊಮ್ಮಿದವು. ಅವರ ಅಂಗವೈಕಲ್ಯವನ್ನು ಲಕ್ಷಿಸದೆ ಅವರು ತಮ್ಮ ಎಡಗೈಯಿಂದ ಚಿತ್ರ ಬಿಡಿಸಲು ಆರಂಭಿಸಿದರು. ಚಿತ್ರ ಬಿಡಿಸುವುದು ಮತ್ತು ಬಣ್ಣ ಹಚ್ಚುವ ಕಲೆ ಅವರ ಚೈತನ್ಯವನ್ನು ಗಟ್ಟಿಗೊಳಿಸಿದವು ಮತ್ತು ಅವರು ಕ್ರಮೇಣ ಖಿನ್ನತೆಯನ್ನು ಮೀರಿದರು.

ಫ್ಲಿಪ್ಕಾರ್ಟ್‌ನ ಸಮರ್ಥ್‌ ಮಾರಾಟಗಾರ ಅಂಗವೈಕಲ್ಯವಿರುವ ಕೋಮಲ್‌ ಪ್ರಸಾದ್‌ ಪಾಲ್
ಅವರ ಶಕ್ತಿ ಉಡುಗಿಸುವ ಅಪಘಾತದ ನಂತರ ಕೋಮಲ್‌ ಪ್ರಸಾದ್‌ ಪಾಲ್‌ ವರ್ಣ ಚಿತ್ರಕಲೆಯ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಮತ್ತೆ ಪಡೆದರು

ಅವರ ತಂದೆ, ತಾಯಿ ಮತ್ತು ತಂಗಿ ಈ ದುರದೃಷ್ಟಕರ ಘಟನೆಯಿಂದ ಬಹಳ ಹತಾಶೆಗೊಂಡರು, ಆದರೆ ಅವರೆಲ್ಲಿಗಿದ್ದ ದುಃಖವು ತಾವು ಯಶಸ್ಸನ್ನು ಸಾಧಿಸಬೇಕೆಂಬ ಮನೋಬಲವನ್ನು ದುರ್ಬಲಗೊಳಿಸಲು ಕೋಮಲ್‌ ಬಿಡಲಿಲ್ಲ. ಅವರಿಗೆ ಏನೇ ಅಂಗವೈಕಲ್ಯವಿರಲಿ ಅವರು ಕುಟುಂಬದ ಸಂಪಾದಿಸುವ ವ್ಯಕ್ತಿಯೆಂಬ ತಮ್ಮ ಕರ್ತವ್ಯವನ್ನು ಪೂರೈಸಲು ನಿರ್ಧರಿಸಿದ್ದರು. ಆಸ್ಪತ್ರೆಯಿಂದ ಆಚೆ ಬಂದ ನಂತರ ಅವರು ವೈದ್ಯಕೀಯ ಪ್ರತಿನಿಧಿಯಾಗಿ ತಮ್ಮ ಕೆಲಸಕ್ಕೆ ಮರಳಲು ಪ್ರಯತ್ನಿಸಿದರು, ಆದರೆ ಆ ಕೆಲಸ ಬೇಡುವ ಶ್ರಮವನ್ನು ಅವರಿಂದ ನಿಭಾಯಿಸಲಾಗಲಿಲ್ಲ. ಅವರ ಅಂಗವೈಕಲ್ಯ ಅವರ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು. ಕೋಮಲ್‌ ಕೆಲಸವನ್ನು ತೊರೆದರು ಮತ್ತು ಅವರು ವೈದ್ಯಕೀಯ ಪ್ರತಿನಿಧಿಯಾಗಿದ್ದ ದಿನಗಳಲ್ಲಿ ಬೆಳೆಸಿಕೊಂಡಿದ್ದ ಸಂಪರ್ಕಗಳ ಜಾಲವನ್ನು ಬಳಸಿಕೊಂಡು ಬಾಣಂತಿಯರಿಗೆ ಮತ್ತು ಶಿಶುಗಳಿಗೆ ವೈಯಕ್ತಿಕ ವಸ್ತುಗಳಾದ ನೆಬ್ಯುಲೈಸರ್‌ಗಳು, ಸ್ತನದ ಪಂಪ್‌ಗಳು ಮುಂತಾದ ಉತ್ಪನ್ನಗಳನ್ನು ಮಾರಲು ಶುರುಮಾಡಿದರು.

ಆರಂಭದಲ್ಲಿ ವ್ಯಾಪಾರ ನಿಧಾನವಾಗಿ ಸಾಗಿತು, ಆದರೆ ಕೋಮಲ್‌ ಎದೆಗುಂದಲಿಲ್ಲ. ಅವರು ಮೈಕ್ರೊಬಯಾಲಜಿಯಲ್ಲಿ ಪದವಿ ಹೊಂದಿದ್ದರಿಂದ ಅವರು ಒಬ್ಬ ಒಳ್ಳೆಯ ವೈದ್ಯಕೀಯ ಪ್ರತಿನಿಧಿಯಾಗಿದ್ದರು. ಆದರೆ ಉದ್ಯಮವು ಒಂದು ಬೇರೆ ತರಹದ ಸವಾಲನ್ನು ಒಡ್ಡುತ್ತದೆ ಎಂದು ಅವರಿಗೆ ತಿಳಿದಿತ್ತು. ಆದರೂ, ಅವರು ಬಿಟ್ಟುಬಿಡಲಿಲ್ಲ. ಅವರು ತಮ್ಮ ಹೊಸ ಉದ್ಯಮದಲ್ಲಿ ಯಶಸ್ವಿಯಾಗುವುದರ ಬಗ್ಗೆ ತಮ್ಮ ಮನಸ್ಸನ್ನು ಅಣಿಗೊಳಿಸಿದರು.

ಅವರು ಯಶಸ್ಸನ್ನು ಅನುಭವಿಸಲು ಎಷ್ಟು ಉತ್ಸುಕರಾಗಿದ್ದರಿಂದರೆ ಅವರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ವಿಧಾನಗಳನ್ನು ಪರಿಶೀಲಿಸ ತೊಡಗಿದರು. ಒಂದು ದಿನ, ಕೋಮಲ್‌ ಫ್ಲಿಪ್ಕಾರ್ಟ್‌ನಲ್ಲಿ ಮಾರಾಟ ಮಾಡುವುದರ ಸಂಭಾವ್ಯತೆಯ ಬಗ್ಗೆ ಒಬ್ಬ ಸ್ನೇಹಿತನನ್ನು ವಿಚಾರಿಸಿದರು. ಅವರ ಸ್ನೇಹಿತ ಅವರನ್ನು ಆನ್ಲೈನ್‌ನಲ್ಲಿ ನೋಡುವಂತೆ ಸೂಚಿಸಿದರು. ಕೋಮಲ್‌ ತಮ್ಮ ಸಂಶೋಧನೆ ಮಾಡಿ, ನಂತರ ಫ್ಲಿಪ್ಕಾರ್ಟ್‌ ಸೆಲ್ಲರ್‌ ಹಬ್‌ನಲ್ಲಿ ನೊಂದಾಯಿಸಿದರು. ಕೆಲವೇ ದಿನಗಳಲ್ಲಿ ಅವರಿಗೆ ಫ್ಲಿಪ್ಕಾರ್ಟ್‌ನ ಆಯ್ಕೆ ಮತ್ತು ಸಂಗ್ರಹಣೆಯ ತಂಡದಸೌರೋಜ್ಯೋತಿ ಯವರಿಂದ ಕರೆ ಬಂದಿತು. ಅವರು ದಾಖಲಾತಿ ಪ್ರಕ್ರಿಯೆಯನ್ನು ನೋಡಿಕೊಂಡರು. ಕೋಮಲ್‌ ಅವರನ್ನು ಯಾವುದೇ ತೊಂದರೆಯಿಲ್ಲದೆ ಸೇರಿಸಿಕೊಳ್ಳಲಾಯಿತು.

Komal Prasad Paul Flipkart Samarth Seller with Disability
೨೦೧೯ರಲ್ಲಿ ಕೋಮಲ್‌ ಪ್ರಸಾದ್‌ ಪಾಲ್‌ ಫ್ಲಿಪ್ಕಾರ್ಟ್‌ ಸಮರ್ಥ ಕಾರ್ಯಕ್ರಮದ ಮೂಲಕ ಫ್ಲಿಪ್ಕಾರ್ಟ್‌ ಮಾರುಕಟ್ಟೆಯಲ್ಲಿ ಒಬ್ಬ ಮಾರಾಟಗಾರರಾದರು

೨೦೧೯ರ ಮೇ ತಿಂಗಳಿನಲ್ಲಿ ಈ ೩೩ ವರ್ಷದ ಅಂಗವೈಕಲ್ಯವಿರುವ ವ್ಯಕ್ತಿ ಒಬ್ಬ ಫ್ಲಿಪ್ಕಾರ್ಟ್‌ನ ಮಾರಾಟಗಾರರಾಗಿ ಒಂದು ಹೊಸ ಜೀವನವನ್ನು ಆರಂಭಿಸಿದರು. ಅಲ್ಟಿಮೇಟ್‌ ಹೈಜೀನ್ ಎಂಬ ಹೆಸರಿನಲ್ಲಿ ಅವರು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಮಾರುತ್ತಾರೆ. ಫ್ಲಿಪ್ಕಾಟ್‌ಗೆ ಸೇರಿದಫ್ಲಿಪ್ಕಾರ್ಟ್‌ ಸಮರ್ಥ ಕಾರ್ಯಕ್ರಮವು ಈ-ಕಾಮರ್ಸ್‌ನ ಪ್ರಪಂಚವನ್ನು ಕಡಿಮೆ ಯಶಸ್ಸಿನ ಉದ್ಯಮಿಗಳು ಮತ್ತು ಕುಶಲಕರ್ಮಿಗಳಿಗೆ ಅವಕಾಶಗಳನ್ನು ತೆರೆಯುತ್ತದೆ. ಕೋಮಲ್‌ ಫ್ಲಿಪ್ಕಾರ್ಟ್‌ ಮಾರಾಟಗಾರರಾದಾಗ ಮೊದಲನೆಯ ದಿನ ಒಂದೇ ಮಾರಾಟದಿಂದ ಆರಂಭಿಸಿದರು ಮತ್ತು ಬೇಗನೆ ಮಾರಾಟದ ಪ್ರಮಾಣ ಏರಿತು. ಇಂದು ಅವರು ಒಂದು ದಿನಕ್ಕೆ ೫೦ ಉತ್ಪನ್ನಗಳನ್ನು ಮಾರುತ್ತಾರೆ ಮತ್ತು ಆ ಪ್ರಮಾಣ ಸ್ಥಿರವಾಗಿ ಬೆಳೆಯುತ್ತಿದೆ. ಕಳೆದ ಕೆಲವು ತಿಂಗಳಿನಲ್ಲಿ ಅವರು ಮಾರಾಟದಲ್ಲಿ ನೂರು ಪ್ರತಿಶತ ವೃದ್ಧಿಯನ್ನು ಕಂಡಿದ್ದಾರೆ. ಅವರು ಒಬ್ಬ ಚಿಕ್ಕ ಉದ್ಯಮಿಯಾದರೂ, ತಮ್ಮ ಯಶಸ್ಸಿನಿಂದಾಗಿ ಅವರು ತಮಗೆ ವಸ್ತುಗಳನ್ನು ಕಂತು ಕಟ್ಟುವುದಕ್ಕೋಸ್ಕರ ಒಬ್ಬ ಕೆಲಸಗಾರನನ್ನು ನಿಯೋಜಿಸಿದ್ದಾರೆ.

ಕೋಮಲ್‌ ಅವರಿಗೆ ಅವರ ಪೋಷಕರು ಪ್ರೇರಣೆಯ ಅತಿ ದೊಡ್ಡ ಮೂಲವಾಗಿದ್ದಾರೆ. ಅವರು ದೈವಭಕ್ತಿಯುಳ್ಳವರಾಗಿದ್ದು ಪ್ರತಿನಿತ್ಯ ಭಗವದ್ಗೀತೆಯನ್ನು ಪಠಿಸುತ್ತಾರೆ. ಅವರು ಜೀವನ ನಡೆಸಲು ಅವರಿಗೆ ಅದು ಶಕ್ತಿ ತುಂಬುತ್ತದೆಂದು ಅವರು ನಂಬಿದ್ದಾರೆ. ಫ್ಲಿಪ್ಕಾರ್ಟ್‌ ಅವರ ಬೆಂಬಲಕ್ಕೆ ಇರುವಾಗ ಅವರು ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆಂದು ಅವರಿಗೆ ಗೊತ್ತಿದೆ. ಮತ್ತೆ, ಹೌದು, ಈಗಲೂ ಅವರಿಗೆ ವರ್ಣ ಚಿತ್ರಕಲೆ ಮಾಡಲು ಸ್ವಲ್ಪ ಸಮಯ ಸಿಗುತ್ತದೆ.


ಇನ್ನೂ ಹೆಚ್ಚು ಪ್ರೇರಣಾದಾಯಕ ಕತೆಗಳನ್ನು ಓದಿ ನಮ್ಮ #ಸ್ವಯಂ-ನಿರ್ಮಿತ ಸರಣಿಯಲ್ಲಿ ಉದ್ಯಮಶೀಲತೆಯ ಕತೆಗಳನ್ನು ಓದಿ

Enjoy shopping on Flipkart