ತನ್ನ ಪೂರೈಕೆ ಸರಪಳಿಯಲ್ಲಿ 2,100 ಕ್ಕೂ ಹೆಚ್ಚು ವಿಕಲಚೇತನರನ್ನು ನೇಮಿಸಿಕೊಂಡಿರುವ ಫ್ಲಿಪ್ಕಾರ್ಟ್ ತನ್ನ eDAB ಉಪಕ್ರಮದೊಂದಿಗೆ ವೈವಿಧ್ಯಮಯ, ಅಂತರ್ಗತ ಮತ್ತು ಸಮಾನ ಕೆಲಸದ ಸ್ಥಳವನ್ನು ರೂಪಿಸುವುದನ್ನು ಮುಂದುವರೆಸಿದೆ. ಅಂತರಾಷ್ಟ್ರೀಯ ವಿಕಲಚೇತನರ ದಿನದಂದು ಮತ್ತು ಪ್ರತಿದಿನ, ಅವರ ಕಥೆಗಳೂ ಸಹ ನೋಡಲು ಮತ್ತು ಓದಲು ಅರ್ಹವಾಗಿವೆ. ಇದು ಪ್ರತಿಯೊಬ್ಬರನ್ನೂ ಅವರ ಕಥೆಯ ಹೀರೋಗಳಾಗಿ ಮಾಡಿದೆ.
“ನನ್ನಿಂದ ಮಾತನಾಡಲು ಮತ್ತು ಕೇಳಲು ಸಾಧ್ಯವಿಲ್ಲ – ಬಹುಶಃ ಅದಕ್ಕಾಗಿಯೇ ಜಗತ್ತು ನನ್ನನ್ನು ಗುರುತಿಸುವುದಿಲ್ಲ. ಆದರೆ ಜೀವನ ಅಂದ್ರೆ ನಿಜಕ್ಕೂ ಸವಾಲುಗಳನ್ನು ಎದುರಿಸುವುದು,” ಎಂದು ತಿಳಿಸಿದ್ದಾರೆಅಜಯ್ ಸಿಂಗ್.
ವೀಕ್ಷಿಸಿ: ಫ್ಲಿಪ್ಕಾರ್ಟ್ನ eDAB ಹಬ್ನ ಕಥೆಗಳು
“ಇಂದಿಗೂ ನಮ್ಮ ಸಮಾಜದಲ್ಲಿ ವಿಕಲಚೇತನ ಮಹಿಳೆಯರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ತಪ್ಪಾದ ಚಿಕಿತ್ಸೆಯಿಂದಾಗಿ ನನ್ನ ಕಾಲಿನಲ್ಲಿ ದೋಷ ಕಾಣಿಸಿಕೊಂಡಿತು. ಇಂದಿಗೂ ನಾನು ಕುಂಟುತ್ತಾ ನಡೆಯುತ್ತೇನೆ. ಇದನ್ನ ನೀವು ಹಣೆಬರಹ ಎಂದಾದರೂ ಹೇಳಬಹುದು ಅಥವಾ ಅದರ ವಿರುದ್ಧ ಹೋರಾಡಲು ಕಲಿಯಬಹುದು” ಎಂದು ಸಂಗೀತಾ ಹೇಳುತ್ತಾರೆ. “ನಾನು ಹೋರಾಡಲು ನಿರ್ಧರಿಸಿದೆ.”
“ನನ್ನ ಎರಡೂ ಕೈಗಳಲ್ಲಿ ಬೆರಳುಗಳಿಲ್ಲ. ಆದರೆ ನಾನು ವಿಕಲಚೇತನ ಎಂದು ನಾನು ಎಂದಿಗೂ ನಂಬಲಿಲ್ಲ. ಬದುಕು ಕಟ್ಟಿಕೊಳ್ಳಲು ಸಾಕಷ್ಟು ಸಹಿಸಿಕೊಂಡೆ. ನಾನು ನಿರ್ಮಾಣ ಸ್ಥಳದಲ್ಲಿ ಕಲ್ಲುಗಳು ಮತ್ತು ಇಟ್ಟಿಗೆಗಳನ್ನು ಹೊರುತ್ತಿದ್ದೆ, ಆಗೊಮ್ಮೆ ನನ್ನ ಎರಡೂ ಬೆರಳುಗಳು ಕತ್ತರಿಸಲ್ಪಟ್ಟವು,” ಎಂದುಶೇಖರ್ ಕುಮಾರ್ ಹೇಳುತ್ತಾರೆ.
ತಮ್ಮ ಪ್ರತಿಭೆಯನ್ನು ನೈಜವಾಗಿ ಪ್ರದರ್ಶಿಸಲು ಅನುವು ಮಾಡಿಕೊಡುವ ಅವಕಾಶಗಳನ್ನು ಹುಡುಕುತ್ತಾ, ಮೂವರೂ ಫ್ಲಿಪ್ಕಾರ್ಟ್ನ ನವದೆಹಲಿಯಲ್ಲಿನ ಅಂಗವೈಕಲ್ಯ ಹೊಂದಿರುವ ಇಕಾರ್ಟಿಯನ್ನರ(eKartians) (eDAB) ವಿತರಣಾ ಕೇಂದ್ರದಲ್ಲಿ ತಮ್ಮ ಅವಕಾಶವನ್ನು ಕಂಡುಕೊಂಡರು.
ಭವಿಷ್ಯವು ಅಂತರ್ಗತ ಮತ್ತು ನ್ಯಾಯಸಮ್ಮತವಾಗಿರುತ್ತದೆ
ತನ್ನ ಉದ್ಯೋಗಿ ನೀತಿಗಳಲ್ಲಿ ಮುಖ್ಯವಾದ ಕೆಲಸದ ಸ್ಥಳದ ಸಮಾನತೆ ಮತ್ತು ವೈವಿಧ್ಯತೆಯೊಂದಿಗೆ, ಫ್ಲಿಪ್ಕಾರ್ಟ್ ತನ್ನ ಪೂರೈಕೆ ಸರಪಳಿ ಕಾರ್ಯಗಳಲ್ಲಿ ವಿಕಲಚೇತನರಿಗೆ ಸಮಾನ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ 2017 ರಲ್ಲಿ eDAB ಪ್ರೋಗ್ರಾಂ ಅನ್ನು ಪರಿಚಯಿಸಿತು.
2021 ರಲ್ಲಿ, ವಿಕಲಚೇತನ ಉದ್ಯೋಗಿಗಳಿಂದಲೇ ನಿರ್ವಹಿಸಲ್ಪಡುವ ಕೇಂದ್ರವೊಂದು ದೆಹಲಿಯಲ್ಲಿ ಆರಂಭವಾಯಿತು – ಇದು ಭಾರತದಲ್ಲಿ ಶೇ. 100ರಷ್ಟು ವಿಕಲಚೇತನ ಉದ್ಯೋಗಿಗಳಿಂದಲೇ ನಡೆಸಲ್ಪಡುವ ಮೊಟ್ಟ ಮೊದಲ ಕೇಂದ್ರವಾಯಿತು. ಈ ಕೇಂದ್ರವು 50 ಕ್ಕಿಂತ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯದೊಂದಿಗೆ, ದಿನಕ್ಕೆ 2,000 ವಿತರಣೆಗಳನ್ನು ಮಾಡುವುದಲ್ಲದೆ, 97% ಗ್ರಾಹಕ ತೃಪ್ತಿ ದರವನ್ನು ಸಹ ಹೊಂದಿದೆ.
ತಂಡದ ನಾಯಕರಿಂದ ಹಿಡಿದು ಕ್ಯಾಷಿಯರ್ಗಳು, ಡೆಲಿವರಿ ಎಕ್ಸಿಕ್ಯೂಟಿವ್ಗಳು, ಪ್ಯಾಕರ್ಗಳು ಮತ್ತು ವಿಂಗಡಣೆದಾರವರೆಗೆ ಈ ಕೇಂದ್ರದಲ್ಲಿರುವ ಪ್ರತಿಯೊಬ್ಬರೂ ಸಹ ಪ್ರತಿಭಾವಂತರು, ಸಮರ್ಥರು ಮತ್ತು ನುರಿತವರಾಗಿದ್ದಾರೆ.
“ಫ್ಲಿಪ್ಕಾರ್ಟ್ ಬಗ್ಗೆ ಸ್ನೇಹಿತರೊಬ್ಬರು ಹೇಳಿದ ಕೂಡಲೇ ನಾನು ಆ ಕಂಪನಿಗೆ ಸೇರಿಕೊಂಡೆ. ಫ್ಲಿಪ್ಕಾರ್ಟ್ಗೆ ಸೇರಿದ ನಂತರ ನಾನು ಎಂದಿಗೂ ಹಿಂತಿರುಗಿ ನೋಡಿಲ್ಲ. ನಾನು ನನ್ನ ಎಲ್ಲಾ ನಾಲ್ಕು ಮಕ್ಕಳಿಗೆ ಸುರಕ್ಷಿತ ಭವಿಷ್ಯವನ್ನು ಒದಗಿಸಬಲ್ಲೆ ಎಂಬ ನಂಬಿಕೆ ನನಗಿದೆ” ಎಂದು ಫ್ಲಿಪ್ಕಾರ್ಟ್ ವಿಶ್ಮಾಸ್ಟರ್ ಮತ್ತು ನಾಲ್ಕು ಮಕ್ಕಳ ತಂದೆ ಶೇಖರ್ ಹೇಳಿದ್ದಾರೆ.
“ನಾನು ಅನೇಕ ಅಲ್ಪಾವಧಿ ಕೆಲಸಗಳನ್ನು ಮಾಡಿದ ನಂತರ ಫ್ಲಿಪ್ಕಾರ್ಟ್ಗೆ ಸೇರಿದೆ. ನನ್ನ ಮೊದಲ ಸಂಬಳವನ್ನು ನನ್ನ ಹೆತ್ತವರ ಕೈಯಲ್ಲಿ ಕೊಟ್ಟು ನನ್ನ ಕಾಲ ಮೇಲೆ ನಿಂತಾಗ ನಾನು ಅನುಭವಿಸಿದ ಸಂತೋಷಕ್ಕೆ ಸಾಟಿಯೇ ಇಲ್ಲ” ಎಂದು ಫ್ಲಿಪ್ಕಾರ್ಟ್ ವಿಶ್ಮಾಸ್ಟರ್ ಆಗಿರುವ ಅಜಯ್ ತಮ್ಮ ಹೆಮ್ಮೆಯ ಕ್ಷಣಗಳಲ್ಲಿ ಒಂದನ್ನು ನೆನಪಿಸಿಕೊಳ್ಳುತ್ತಾರೆ.
ಈಗ ಅದೇ ಕೇಂದ್ರದಲ್ಲಿ ಟೀಮ್ ಲೀಡರ್ ಆಗಿರುವ ಸಂಗೀತಾ, ಹಲವು ಉದ್ಯೋಗಗಳನ್ನು ಮಾಡಿದ್ದಾರೆ. “ಆದರೆ ಫ್ಲಿಪ್ಕಾರ್ಟ್ನಲ್ಲಿ, ನಾನು ನನ್ನ ಕುಟುಂಬವನ್ನು ಕಂಡುಕೊಂಡಿದ್ದೇನೆ” ಎಂದು ಹೇಳುತ್ತಾರೆ.
ಬೆಂಬಲಿಸುವ ಸಂಸ್ಕೃತಿ
ವೈವಿಧ್ಯಮಯ ಪ್ರತಿಭೆಗಳನ್ನು ಪೂರ್ವಭಾವಿಯಾಗಿ ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಮೂಲಕ, eDAB ಉಪಕ್ರಮವು ಇಂದು ಫ್ಲಿಪ್ಕಾರ್ಟ್ನ ಪೂರೈಕೆ ಸರಪಳಿಯನ್ನು ಬಲಪಡಿಸುವ ಅಂಗವೈಕಲ್ಯ ಹೊಂದಿರುವ 2,100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
eDAB ಕಾರ್ಯಕ್ರಮದ ಮೂಲಕ, ವಿಶೇಷ ತರಗತಿ ಕೊಠಡಿಗಳು ಮತ್ತು ಸಂಕೇತ ಭಾಷಾ ವ್ಯಾಖ್ಯಾನಕಾರರ ಸಹಾಯದಿಂದ ಉದ್ಯೋಗದ ತರಬೇತಿ ಕಾರ್ಯಕ್ರಮಗಳು ಉದ್ಯೋಗಿಗಳ ಬೆಳವಣಿಗೆಯನ್ನು ಪೋಷಿಸುತ್ತವೆ. ಕಾರ್ಯಕ್ರಮವು ಎಲ್ಲಾ ಉದ್ಯೋಗಿಗಳಿಗೆ ಸಂವೇದನಾಶೀಲತೆಯ ಸೆಷನ್ಗಳು ಮತ್ತು ಪರಾನುಭೂತಿ ತರಬೇತಿಯನ್ನು ಖಾತ್ರಿಗೊಳಿಸುತ್ತದೆ ಮತ್ತು ಎಲ್ಲರಿಗೂ ಪೂರೈಕೆ ಸರಪಳಿ ಸೌಲಭ್ಯಗಳನ್ನು ಪಡೆಯಲು ಮೂಲಸೌಕರ್ಯದಲ್ಲಿ ಮಾರ್ಪಾಡುಗಳನ್ನು ತರುತ್ತದೆ.
ವಿಶ್ಮಾಸ್ಟರ್ಗಳಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಬ್ಯಾಡ್ಜ್ಗಳು ಮತ್ತು ಫ್ಲ್ಯಾಷ್ಕಾರ್ಡ್ಗಳು ಗ್ರಾಹಕರೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
eDAB ಹಬ್ನಲ್ಲಿ ಮತ್ತು ಫ್ಲಿಪ್ಕಾರ್ಟ್ನಾದ್ಯಂತ, ಸೇರ್ಪಡೆ, ನಿರಂತರ ಬೆಂಬಲ ಮತ್ತು ಗೌರವದ ಸಂಸ್ಕೃತಿಯು ಸಂಗೀತಾ, ಅಜಯ್ ಮತ್ತು ಶೇಖರ್ ಅವರಂತಹ ಅನೇಕರನ್ನು ನಿಜವಾಗಿಯೂ ಬೆಳೆಯಲು ಮತ್ತು ಸೇರಲು ಅನುವು ಮಾಡಿಕೊಡುತ್ತದೆ. “ನಮ್ಮ ಹೋರಾಟಗಳು ವಿಭಿನ್ನವಾಗಿರಬಹುದು, ಆದರೆ ನಾವೆಲ್ಲರೂ ನಮ್ಮದೇ ಕಥೆಗಳ ನಾಯಕರು,” ಎಂದು ಸಂಗೀತಾ ಹೇಳುತ್ತಾರೆ.
ಇದನ್ನೂ ಓದಿ: ಅಂತರ್ವೇಶನ ವಾಣಿಗಳು: ಪ್ರಗತಿಶೀಲ ಕೆಲಸದ ಸ್ಥಳದಲ್ಲಿನ ಕಥೆಗಳು